ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದರು. ಶೃಂಗೇರಿ ಶಾರದಾ ಪೀಠದ ಗುರುಗಳು ನಮ್ಮ ಮನೆಗೆ ಬಂದಿದ್ದರು. ಗುರುವಂದನಾ ಮಾಡುವ ಅವಕಾಶ ಸಿಕ್ಕಿತು. ಕರ್ನಾಟಕ, ಭಾರತದಲ್ಲಿ ಶಂಕರಾಚಾರ್ಯ ಸ್ಥಾಪಿಸಿದ ಈ ಪೀಠ ತನ್ನದೇ ಆದ ಪಾವಿತ್ರತ್ಯೆ ಹೊಂದಿದೆ. ತಾಯಿ ಸರಸ್ವತಿ ಎಲ್ಲರಿಗೂ ಹರಸಲಿ. ನಮ್ಮ ಕುಟುಂಬಕ್ಕೆ, ರಾಜ್ಯಕ್ಕೆ ಒಳ್ಳೆದಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.
ಇದೇ ಮಾಜಿ ಶಾಸಕ ಕೆಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷರು, ಪಕ್ಷಕ್ಕೂ ರಾಜಣ್ಣನವರ ಹೇಳಿಕೆಗೆ ಯಾವುದೇ ಸಂಬಂಧವಿಲ್ಲ. ಕ್ಷಮೆ ಕೇಳಬೇಕು ಎಂದು ವರಿಷ್ಠರು ನಾನು ಸೂಚನೆ ನೀಡಿದ್ದೇನೆ. ರಾಜಣ್ಣನವರು ಗೌರವದಿಂದ ತಪ್ಪಾಯಿತು ಎಂದು ಹೇಳಿದ್ದಾರೆ.
ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಹೆಚ್ಚು ಸೀಟ್ ಗೆಲ್ಲುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್. ಸರ್ಕಾರ ಬರುತ್ತೆ ಅಂತ ಎಲ್ಲರೂ ಮಾತನಾಡಿದ್ದಾರೆ. ಎರಡು ಮೂರು ಸಮೀಕ್ಷೆ ನಾನು ಮಾಡಿಸಿದ್ದೇನೆ, ದೆಹಲಿಯವರು ಮಾಡಿಸಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ನಾವು ಗೆದ್ದಿದ್ದೇವೆ, ಬಿಜೆಪಿನೂ ಗೆದ್ದಿದೆ. ಎಂಎಲ್ ಸಿ ಎಲೆಕ್ಷನ್‌ನಲ್ಲೂ ಕೂಡ ಸಮಾನವಾಗಿ ಗೆದ್ದಿದ್ದೇವೆ. ಶಿಕ್ಷಕರ ಕ್ಷೇತ್ರದಲ್ಲಿ ಯಾವತ್ತು ಗೆದ್ದಿರಲಿಲ್ಲ, ಇವತ್ತು ಗೆದ್ದಿದ್ದೇವೆ. ಶಿಕ್ಷಕರು, ಪದವೀದರರು ನಮ್ಮನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್‌ಗೆ ವಿದ್ಯಾವಂತರು, ಪ್ರಜ್ಞಾವಂತರು ಮತ ಹಾಕಿದ್ದಾರೆ ಎಂದರು.