ನಮ್ಮ ದೇಶದಲ್ಲಿ ರಾಷ್ಟ್ರಪತಿ ಮೊದಲ ಪ್ರಜೆ. ಪ್ರಸ್ತುತ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಮುಕ್ತಾಯವಾಗಲಿದೆ. ಅವರು ದೇಶದ 14 ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಅವರ ನಿವೃತ್ತಿಗೆ ಸಿದ್ಧತೆಗಳು ಕೂಡ ನಡೆಯುತ್ತಿವೆ. ನಿವೃತ್ತಿಯಾದ ಬಳಿಕ ರಾಷ್ಟ್ರಪತಿ ಕೋವಿಂದ್ ಅವರು ನಂತರ ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮಾಧ್ಯಮ ವರದಿಗಳ ಪ್ರಕಾರ, ನಿವೃತ್ತಿಯ ಬಳಿಕ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರ ರಾಜಧಾನಿ ದೆಹಲಿಯ 12 ಜನಪಥ್‌ನಲ್ಲಿರುವ ನಿವಾಸದಲ್ಲಿ ವಾಸಿಸಲಿದ್ದಾರೆ. ಇದು ಲುಟ್ಯೆನ್ಸ್ ದೆಹಲಿಯ ಅತಿದೊಡ್ಡ ಬಂಗಲೆಗಳಲ್ಲಿ ಒಂದಾಗಿದೆ. ಆದರೆ, ಅವರ ಹೆಸರಿಗೆ ಇನ್ನೂ ಹಂಚಿಕೆಯಾಗಿಲ್ಲ.
ಪ್ರೆಸಿಡೆಂಟ್ ಎಲಿಮೆಂಟ್ಸ್ ಆಕ್ಟ್ 1951 ರ ಪ್ರಕಾರ, ಭಾರತದ ರಾಷ್ಟ್ರಪತಿಗಳು ನಿವೃತ್ತಿಯ ಬಳಿಕ ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಾರೆ.
ಮಾಸಿಕ ಪಿಂಚಣಿ,
ಇಬ್ಬರು ಕಾರ್ಯದರ್ಶಿಗಳು ಹಾಗೂ ದೆಹಲಿ ಪೊಲೀಸರ ಭದ್ರತೆ
ಕನಿಷ್ಠ 8 ಕೊಠಡಿಗಳೊಂದಿಗೆ ಸುಸಜ್ಜಿತ ಸರ್ಕಾರಿ ಬಂಗಲೆ
2 ಲ್ಯಾಂಡ್ ಲೈನ್ ಫೋನ್, 1 ಮೊಬೈಲ್ ಮತ್ತು 1 ಇಂಟರ್ನೆಟ್ ಸಂಪರ್ಕ
ಉಚಿತ ನೀರು ಮತ್ತು ವಿದ್ಯುತ್
ಕಾರುಗಳು ಮತ್ತು ಚಾಲಕರು
ಜೀವಿತಾವಧಿಯವರೆಗೆ ರೈಲು ಮತ್ತು ವಿಮಾನಕ್ಕಾಗಿ ಉಚಿತ ಟಿಕೆಟ್ ಅಧ್ಯಕ್ಷರ ಪತ್ನಿಗೆ ಕಾರ್ಯದರ್ಶಿ 30,000 ರೂ. ನೆರವು ನೀಡಲಾಗುತ್ತದೆ.