ಮೊನ್ನೆ ನಡೆದಂತಹ ಚಿಕ್ಕ ಘಟನೆಯಿಂದ ನನಗೆ ಸರ್ಜರಿ ಆಗಿತ್ತು. ಒಂದು ದೊಡ್ಡ ಅಪಘಾತವಾಗಬಹುದಾಗಿತ್ತು. ಆದರೆ,ವೈದ್ಯರು ಸರ್ಜರಿ ಮೂಲಕ ತಪ್ಪಿಸಿ, ಗುಣಮುಖರನ್ನಾಗಿ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ಸ್ಯಾಂಡಲ್ ವುಡ್ ನಟ ದಿಗಂತ್ ಅವರು ಹೇಳಿದ್ದಾರೆ.
ಈ ವಿಷಯದ ಕುರಿತು ವೀಡಿಯೋ ಬಿಡುಗಡೆ ಮಾಡಿರುವಂತಹ ದಿಗಂತ್ ಅವರು, ನನಗಾದಂತ ಚಿಕ್ಕ ಘಟನೆಯಿಂದಾಗಿ ಒಂದು ಸಣ್ಣ ಸರ್ಜರಿಯಾಗಿದೆ. ಈ ಸಂಧರ್ಭದಲ್ಲಿ ನನಗೆ ಬಹಳಷ್ಟು ಜನರು ಸಹಕರಿಸಿದ್ದಾರೆ. ಗೋವಾದಿಂದ ಏರ್ ಲಿಫ್ಟ್ ಮಾಡೋದಕ್ಕೆ ಗೋವಾ ಸಿಎಂ ಸಹಕರಿಸಿದ್ದಾರೆ. ಚಿಕಿತ್ಸೆಯ ಮೂಲಕ ಮಣಿಪಾಲ್ ಆಸ್ಪತ್ರೆಯ ವೈದ್ಯರು ನೆರವಾಗಿದ್ದಾರೆ ಅವರೆಲ್ಲರಿಗೂ ನನ್ನ ಧನ್ಯವಾದಗಳನ್ನು ವಿಡಿಯೋ ಮುಖಾಂತರ ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ವೈದ್ಯರಾದಂತ ಡಾ.ವಿದ್ಯಾಧರ್ ಅವರು ದೇವರ ರೂಪದಲ್ಲಿ ಬಂದು ನನಗೆ ಸರ್ಜರಿ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. ನನ್ನ ಆರೋಗ್ಯ ಬಗ್ಗೆ ತೀರ್ಥಹಳ್ಳಿಯ ಶಾಲಾ ಸ್ನೇಹಿತರು. ನನ್ನ ಸಿನಿಮಾ ಇಂಡಸ್ಟ್ರಿಯ ಗೆಳೆಯರು ವಿಚಾರಿಸಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.