ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ಭಾರತೀಯ ಚಿತ್ರರಂಗದ ಕೆಲವೇ ಕೆಲವು ವರ್ಸಟೈಲ್ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿದ್ದಾರೆ.
ನಾಯಕನಾಗಿ ಆಯಂಟಿ ಹೀರೋ, ವಿಲನ್ ಪಾತ್ರಗಳಲ್ಲೂ ಮಿಂಚಬಲ್ಲ ಅದ್ಭುತ ನಟನಾಗಿರುವ ಇವರ
ಜೈ ಭೀಮ್ ಮತ್ತು ಸುರರೈ ಪೋಟ್ರು ಚಿತ್ರಗಳು ಆಸ್ಕರ್ ತನಕ ತಲುಪಿತ್ತು.
ಇದೀಗ ಸೂರ್ಯ ಅವರಿಗೆ ಆಸ್ಕರ್ ಅಕಾಡೆಮಿಯಿಂದ ಕರೆ ಬಂದಿರುವುದು ದೃಢಪಟ್ಟಿದೆ.
ಈ ಬಾರಿ ಅವರು ಆಸ್ಕರ್‌ಗೆ ಅತಿಥಿಯಾಗಿ ಹಾಜರಾಗಲಿದ್ದಾರೆ, ಆದರೆ ಅವರ ಚಿತ್ರಗಳು ಆಸ್ಕರ್‌ನಲ್ಲಿ ಇರುವುದಿಲ್ಲ. ಆಸ್ಕರ್ 2022 ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಜಗತ್ತಿನಾದ್ಯಂತ 397 ಮಂದಿಗೆ ಆಹ್ವಾನ ಬಂದಿದ್ದು, ಅವರಲ್ಲಿ ಹೀರೋ ಸೂರ್ಯ ಮತ್ತು ನಟಿ ಕಾಜೊಲ್ ಅವರಿಗೂ ಸಹ ಆಮಂತ್ರಣ ಬಂದಿದೆ ಎಂದು ತಿಳಿದುಬಂದಿದೆ.
ಭಾರತದಿಂದ ಇಬ್ಬರು ಸಿನಿ ತಾರೆಯರಿಗೆ ಆಸ್ಕರ್ ಆಮಂತ್ರಣ ನೀಡಿದೆ.
ಈ ವರ್ಷ 2022 ರ ಆಸ್ಕರ್‌ಗೆ ವಿಶ್ವದಾದ್ಯಂತ 397 ಹೊಸ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ. ಆದರೆ ನಮ್ಮ ಭಾರತೀಯ ಚಿತ್ರರಂಗದಿಂದ ಈ ಇಬ್ಬರು ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ದಕ್ಷಿಣ ಭಾರತದಿಂದ ಇದೇ ಮೊದಲ ಬಾರಿಗೆ ನಟನೊಬ್ಬನು ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆದ ಖ್ಯಾತಿಗೆ ಸೂರ್ಯ ಭಾಜನರಾಗಿದ್ದಾರೆ.
ಸೂರ್ಯ ಸದ್ಯದಲ್ಲಿಯೇ ನಿರ್ಮಾಪಕರಾಗಿಯೂ ಹೊಸ ಆಯಾಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2ಡಿ ಎಂಟರ್ಟೈನ್ಮೆಂಟ್ ಮೂಲಕ ಸೂರರೈ ಪೊಟ್ರು ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಿದ್ದಾರೆ.ಇನ್ನು, ಬಾಲಿವುಡ್ ನಟಿ ಕಾಜೂಲ್ ಸಹ ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದರಲ್ಲಿ 397ರಲ್ಲಿ 71 ಸದಸ್ಯರು ಆಸ್ಕರ್ ನಾಮಿನಿಗಳಾಗಿದ್ದು, 15 ಮಂದಿ ವಿಜೇತರು ಇದ್ದಾರೆ.