ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ನಿನ್ನೆ ಸಂಜೆ ಮಕ್ಕಳ ಚಿಕಿತ್ಸೆಗೆಂದು ನೀಡಿದ ಇಂಜೆಕ್ಷನ್ ಈಗ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಇದರಿಂದ ಮಕ್ಕಳ ಪೋಷಕರು ಆತಂತಕ್ಕೆ ಒಳಗಾಗಿದ್ದಾರೆ.
ಸಾಗರ ತಾಲೂಕು ಆಸ್ಪತ್ರೆಯಲ್ಲಿ 10 ತಿಂಗಳನಿಂದ 12 ವರ್ಷದ 14 ಮಕ್ಕಳು ಚಿಕಿತ್ಸೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಸಂಜೆಯ ಡೋಸ್ ಜೋನ್ ಎನ್ನುವ ಇಂಜಿಕ್ಷನ್ ನೀಡಿದ್ದಾರೆ. ಈ ಡೋಸ್ ಕೊಟ್ಟ ಕೆಲವೇ ನಿಮಿಷಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಿದೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದ ಮಕ್ಕಳಿಗೆ ಇಂಜೆಕ್ಷನಿಂದ ಅಡ್ಡ ಪರಿಣಾಮದಿಂದ ಆರೋಗ್ಯ ಹದಿಗೆಟ್ಟು ಹೋಗಿದೆ. 4 ಮಕ್ಕಳಲ್ಲಿ ತೀವ್ರ ಚಳಿ ಜ್ವರ ಕಾಣಿಸಿಕೊಂಡಿದೆ.
ಕೂಡಲೇ 3 ಮಕ್ಕಳಾದ ವಿನೋದ(11), ಐರಾಫ್, ಆರ್ಯಗೌಡ 2 ವರ್ಷ 9 ತಿಂಗಳು ಇವರಿಗೆ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ನಿಶ್ಚಿತಾ ಎನ್ನುವ 8 ವರ್ಷದ ಮಗುವನ್ನು ಸರ್ಜಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 10 ಮಕ್ಕಳಿಗೆ ಸಾಗರ ತಾಲೂಕು ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಸ್ತುತ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.