ಇತ್ತೀಚೆಗೆ ನಡೆದ 2 ಪ್ರಮುಖ ಉಪಚುನಾವಣೆಗಳಲ್ಲಿ ಆಡಳಿತಾರೂಢ ಕನ್ಸರ್‌ವೇಟಿವ್ ಪಾರ್ಟಿಗೆ ಹೀನಾಯ ಸೋಲು ಆಗಿದೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಹಿನ್ನಡೆ ಉಂಟಾಗಿದೆ.
ಈ ಸೋಲು, ಜಾನ್ಸನ್ ಅವರ ಆಪ್ತರೂ ಆಗಿರುವ ಪಕ್ಷದ ಅಧ್ಯಕ್ಷ ಆಲಿವರ್ ಡೌಡೆನ್ ರಾಜೀನಾಮೆ ನೀಡುವಂತೆ ಮಾಡಿದೆ.
ಅಲ್ಲದೇ, ಬೋರಿಸ್ ಅವರ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಉತ್ತರ ಇಂಗ್ಲೆಂಡ್‌ನ ವೇಕ್‌ಫೀಲ್ಡ್, ದಕ್ಷಿಣ ಇಂಗ್ಲೆಂಡಿನ ಟಿವರ್ಟನ್ ಮತ್ತು ಹೊನಿಟನ್ ಕ್ಷೇತ್ರಗಳಲ್ಲಿ ಕನ್ಸರ್ವೆಟಿವ್ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಈ ಉಪಚುನಾವಣೆಗಳ ಫಲಿತಾಂಶವನ್ನು ಬೋರಿಸ್ ಜಾನ್ಸನ್ ಅವರ ಪಕ್ಷದ ನಾಯಕತ್ವಕ್ಕೆ ಸಿಕ್ಕಿರುವ ಜನಾಭಿಪ್ರಾಯ ಎಂದೇ ಅರ್ಥೈಸಲಾಗುತ್ತಿದೆ.
ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಡೆಸಿದ ಸಂತೋಷಕೂಟದ ಪಾರ್ಟಿ ಗೇಟ್ ಹಗರಣವು ಜಾನ್ಸನ್ ಅವರಿಗೆ ಈ ಉಪಚುನಾವಣೆಯಲ್ಲಿ ಭಾರಿ ಪೆಟ್ಟು ಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.