ಅಗ್ನಿಪಥ
,ಸರಿ.ಯುವಜನರಿಗೆ ಉದ್ಯೋಗ ನೀಡಿಕೆ ಯೋಜನೆ ಇದಾಗಿದೆ. ಅಗ್ನಿಪಥ
ಬಿಸಿನೆತ್ತರ ಯುವಜನರ ದಂಡು ಕಟ್ಟುವ ಕೆಲಸ.
ಏನಿದು ಹೊಸ ಯೋಜನೆ? 17.5ರಿಂದ 21 ವರ್ಷದ 46,000 ಯುವಕರನ್ನು 4 ವರ್ಷ ಅವಧಿಗೆ ಅಗ್ನಿವೀರರು ಎಂಬ ಹೆಸರಿನೊಂದಿಗೆ ಸೇನೆಯ 3 ವಿಭಾಗಗಳಿಗೆ ನೇಮಿಸಿಕೊಳ್ಳುವುದು ಅಗ್ನಿಪಥ ಯೋಜನೆಯ ತಿರುಳು. ಇವರಲ್ಲಿ ಶೇ.25ರಷ್ಟು ಜನರನ್ನು ಸೇನಾಪಡೆಗಳ ಪೂರ್ಣಾವಧಿ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಇನ್ನುಳಿದವರು 4 ವರ್ಷದ ಬಳಿಕ ನಿವೃತ್ತರಾಗಲಿದ್ದಾರೆ. ಆದರೆ, ಅವರಿಗೆ ಯಾವುದೇ ನಿವೃತ್ತಿ ಸೌಲಭ್ಯಗಳು ಸಿಗುವುದಿಲ್ಲ. ಅವರು ಬೇರೆ ಉದ್ಯೋಗ ಹುಡುಕಿಕೊಳ್ಳಬೇಕು. ವೇತನ ಮತ್ತು ಪಿಂಚಣಿಗಾಗಿ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚವಾಗುವುದನ್ನು ತಡೆದು ಸರ್ಕಾರಿ ಬೊಕ್ಕಸಕ್ಕೆ ಉಳಿತಾಯ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ನಮಗೆ ವಿವಾದಗ್ರಸ್ತ ಸಂಗತಿಯೆಂದರೆ 4 ವರ್ಷ ದೇಶ,ದೇಶಭಕ್ತ,ದೇಶಕ್ಕಾಗಿ ಹೋರಾಟ ಎಂಬೆಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡ ಯುವಜನ ಕೇವಲ 4 ವರ್ಷಗಳಲ್ಲಿ ಅವುಗಳನ್ನೆಲ್ಲ ಮಣ್ಣುಪಾಲು ಮಾಡಬೇಕೆ? ಮಾನವ ಜೀವಿತದಲ್ಲಿ 17 ರಿಂದ 21 ವಯಸ್ಸು ಅಮೂಲ್ಯವಾದ ಸಮಯ. ಆದರೆ, ಜೀವನದ ಹೊಣೆ ಶುರುವಾಗುದೇ ಭಾರತೀಯ ಕುಟುಂಬಗಳಲ್ಲಿ ಇಪ್ಪತ್ತೊಂದರ ವಯಸ್ಸಿನಲ್ಲಿ.ಇಂತಹ ಸುವರ್ಣ ಘಳಿಗೆಯಲ್ಲಿ ನಿರುದ್ಯೋಗದ ಬೆಂಕಿಗೆ ಬೀಳುವಂತಾದರೆ ಯೋಜನೆಗಳ ಸಾಫಲ್ಯವೇನು? ಎನ್ನುವುದೇ ಪ್ರಶ್ನೆ.
ಸೈನ್ಯದಲ್ಲಿ 4 ವರ್ಷ ಸೇವೆಸಲ್ಲಿಸಿ ಮರಳಿ ಮನೆಯಲ್ಲಿ ಅದೇ ನಿರುದ್ಯೋಗ ಬವಣೆ ಅನುಭವಕ್ಕೆ ಬಿದ್ದರೆ ನಿಜಕ್ಕೂ ಅವರದ್ದು ಶೋಚನೀಯ ಪರಿಸ್ಥಿತಿ.
ಕೇವಲ ಶೇ. 25 ರಷ್ಟು ಮಂದಿಯನ್ನ ಮುಂದಿನ ಸೇವೆಗೆ ಸೇರಿಸಿಕೊಳ್ಳಲಾಗುತ್ತದೆ ಎಂದರೆ ಅದು ಸಮಾಧಾನಕರವಲ್ಲ.ಉಳಿದ ಶೇ. 75 ರಷ್ಟು ಮಂದಿಗೆ ಆಯಾ ರಾಜ್ಯಗಳ ಪೋಲಿಸ್ ಇಲಾಖೆಗೆ ಭರ್ತಿ ಮಾಡಿಕೊಳ್ಳುವ ನೌಕರಿ ಭರವಸೆ ಇದ್ದರೆ ಬಹಳ ಒಳ್ಳೆಯದು.
ಈಗಾಗಲೇ, ಯುವಜನ ರೊಚ್ಚಿಗೆದ್ದಿದ್ದಾರೆ. ಆ ವೇಗವನ್ನ ಶಮನಗೊಳಿಸಲು
ಸದ್ಯ ಕೇಂದ್ರತರ ಸರ್ಕಾರವು ನೌಕರಿಭರವಸೆ ನೀಡಿದರೆ ಯೋಜನೆ ಸಫಲವಾಗುತ್ತದೆ.