ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಯ ಕನ್ನಡ ವಿರೋಧಿ ನೀತಿ ಖಂಡಿಸಿ ಹಾಗೂ ನಾಡದ್ರೋಹಿಗಳ ಬಂಧನಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು.
ಇತ್ತೀಚಿಗೆ ರಾಜ್ಯಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗಾಗಿ ಸಮಿತಿ ರಚನೆ ಮಾಡಿ ಅದರ ನೇತೃತ್ವವನ್ನು ರೋಹಿತ್ ಚಕ್ರತೀರ್ಥ ರವರಿಗೆ ವಹಿಸಿತ್ತು. ಶಾಲಾ ಮಕ್ಕಳಿಗೆ ನಾಡು ನುಡಿಗಾಗಿ ದುಡಿದವರ, ಮಡಿದವರ, ಹಿರಿಮೆಯ ವಾಸ್ತವ ಸಂಗತಿಗಳನ್ನು ತಿಳಿಸಿ ಕೊಡಬೇಕಾಗಿತ್ತು. ದುರಂತವೇನೆಂದರೆ ಈಗಾಗಲೇ ತಮ್ಮ ನಡೆ ನುಡಿಯಲ್ಲಿ ಕನ್ನಡ ವಿರೋಧಿ ತನವನ್ನು ಮೈಗೂಡಿಸಿಕೊಂಡ ವ್ಯಕ್ತಿಗೆ ನೇತೃತ್ವವನ್ನು ನೀಡುವ ಮೂಲಕ ರಾಜ್ಯ ಸರ್ಕಾರ ಎಡವಿತು. ಅದನ್ನ ನಾಡಿನ ಹೆಸರಾಂತ ಲೇಖಕರು, ಬುದ್ಧಿಜೀವಿಗಳು ವಿರೋಧಿಸಿ ಪತ್ರ ಕೂಡ ಬರೆದಿದ್ದರು.
ಎಚ್ಚರಿಕೆಯ ನಂತರವಾದರೂ ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕಾದ ಚಕ್ರತೀರ್ಥ ಮತ್ತಷ್ಟು ಉದ್ದಟತನದಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್, ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ, ರಾಷ್ಟ್ರಕವಿ ಕುವೆಂಪು ರವರನ್ನು ಸೇರಿದಂತೆ ಇನ್ನೂ ಹಲವಾರು ಮಹನೀಯರ ಬಗ್ಗೆ ಅವಹೇಳನ ಮಾಡಿ ಅವರನ್ನು ಅವಮಾನಿಸಿದ್ದಾರೆ ನಾಡಿನ ಜನರ ಭಾವನೆಗೆ ತಂದಿದ್ದಾರೆ. ಈಗಾಗಲೇ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಸಮಿತಿ ವಿಸರ್ಜಿಸಿದ. ಆದರೆ ನಾಡಿನ ಮಹನೀಯರನ್ನು, ಸಾಧಕರನ್ನು ಅವಮಾನಿಸಿರುವ ಚಕ್ರತೀರ್ಥ ಅವರನ್ನು ಕೇವಲ ಕೈ ಬಿಟ್ಟರೆ ಸಾಲದು ಬದಲಾಗಿ ಅವರನ್ನು ಬಂದಿಸಿ ಶಿಕ್ಷೆ ಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಿಯನ್ನು ಸಲ್ಲಿಸಲಾಗಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಅಂತ ಆರ್ ಮಂಜು ತಾಲೂಕು ಅಧ್ಯಕ್ಷರು ಶೈಲೇಶ್ ರಾಜ್ಯ ಸಂಚಾಲಕರು ಎಸ್ ಮಧು ಪ್ರಧಾನ ಕಾರ್ಯದರ್ಶಿ ಅಂಬರೀಶ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.