ಶಿರಸಿ ತಾಲೂಕಿನ ಬನವಾಸಿ ಜನತಾ ಕಾಲೋನಿಯ ನಿವಾಸಿ ಕುಮಾರಿ ಅಂಜುಮ್ ಬಷೀರ್ ಸಾಬ್ ಕುವೆಂಪು ವಿವಿ ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಗಳಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ಅವರಿಗೆ ರಾಜ್ಯಪಾಲರು, ಕುವೆಂಪು ವಿವಿಯ ಕುಲಾಧಿಪತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ಪದವಿ ಪ್ರಮಾಣಪತ್ರ ಹಾಗೂ ಮೂರು ಸುವರ್ಣ ಪದಕಗಳನ್ನು ಸ್ವೀಕರಿಸಿದರು.
ಬನವಾಸಿಯ ಜನತಾ ಕಾಲೋನಿಯ ಬಷೀರ್ ಸಾಬ್ ಹಾಗೂ ಶಾಬೀರ ದಂಪತಿಗಳ ದ್ವಿತೀಯ ಪುತ್ರಿ ಕುಮಾರಿ ಅಂಜುಮ್ ಅವರು ತಮ್ಮ ಸಾಧನೆಗೆ ಪೋಷಕರು ಹಾಗೂ ಪ್ರಾಧ್ಯಾಪಕರು, ಸ್ನೇಹಿತರೆಲ್ಲರೂ ಕಾರಣ ಎಂದು ಸ್ಮರಿಸಿಕೊಂಡಿದ್ದಾರೆ.
ತಾನು ಚೆನ್ನಾಗಿ ಓದಬೇಕು. ಜೀವನದಲ್ಲಿ ಒಳ್ಳೆಯ ಸಾಧನೆ ಮಾಡಬೇಕು ಎಂಬುದು ಅವರ ಕನಸಾಗಿತ್ತು. ತನ್ನ ತಾಯಿಗೆ ತಾನು ಹೆಚ್ಚು ಹೆಚ್ಚು ಓದಬೇಕು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಹೊಂದಿದ್ದರು. ಅದರಂತೆ ನಾನು ಕಷ್ಟಪಟ್ಟು ಓದಿದ್ದೆ. ರಾಂಕ್ ಬರುವ ನಿರೀಕ್ಷೆ ಇರಲಿಲ್ಲ. ಮೂರು ಚಿನ್ನದ ಪದಕ ಗಳಿಸಿರುವುದು ಅತಿ ಹೆಚ್ಚು ಸಂತೋಷವನ್ನು ನನಗೆ ನೀಡಿದೆ ಎಂದು ನಮ್ಮ ಕೆಲೈವ್ ಮಾಧ್ಯಮದೊಂದಿಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಪ್ರಸ್ತುತ, ಅಂಜುಮ್ ಬಷೀರ್ ಸಾಬ್ ಅವರು ಶಿವಮೊಗ್ಗದ ಕೆ ಲೈವ್ ನ್ಯೂಸ್ ಚಾನೆಲ್ ನಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೆಲೈವ್ ಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ರಾಜೇಶ್ ಕಿಳಂಬಿ ಅವರು ಅಂಜುಮ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂಜುಮ್ ಅವರು ಮುಂದೆ ಭವಿಷ್ಯದಲ್ಲಿ ಮಾಧ್ಯಮದ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಲಿ ಎಂದು ಹಾರೈಸಿದ್ದಾರೆ.
ಕೆ ಲೈವ್ ಮಾಧ್ಯಮದ ಪ್ರಧಾನ ಸಂಪಾದಕರಾದ ಡಾ. ಸುಧೀಂದ್ರ ಹಾಗೂ ಉಪಸಂಪಾದಕಿ ರಚನಾ. ಕೆ.ಆರ್, ಕ್ಯಾಮೆರಾ ಮ್ಯಾನ್ ರಂಜನ್ .ಕೆ.ಎಸ್, ಅಕೌಂಟೆಂಟ್ ಸಂತೋಷ್ ಶೇಟ್ ಅವರು ಶುಭ ಹಾರೈಸಿದ್ದಾರೆ.