Thursday, March 19, 2026
Thursday, March 19, 2026

ಫೈಜ್ನಟ್ರಾಜ್ ಅವರ ಕೇಳದೆ ನಿಮಗೀಗ ಕೃತಿಗೆ ಮುಸ್ಲೀಂ ಸಾಹಿತ್ಯ ಪ್ರಶಸ್ತಿ

Date:

ಕನ್ನಡದಲ್ಲಿ ಪ್ರಕಟಿತ ಮುಸ್ಲಿಂ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2020ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಂ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ, ಕವಿ, ಅಧ್ಯಾಪಕ ಸಂತೆಬೆನ್ನೂರು ಫೈಜ್ನಟ್ರಾಜ್ ರವರ ‘ಕೇಳದೆ ನಿಮಗೀಗ ಕೃತಿ ಆಯ್ಕೆಯಾಗಿದೆ.

ಎದೆಯೊಳಗಿನ ತಲ್ಲಣ ಹಾಗೂ ಬುದ್ಧನಾಗ ಹೊರಟು ಕವನ ಸಂಕಲನಗಳು, ಮಂತ್ರದಂಡ ಮಕ್ಕಳ ಕವನ ಸಂಕಲನ, ಸ್ನೇಹದ ಕಡಲಲ್ಲಿ ಮಕ್ಕಳ ಕಥಾ ಸಂಕಲನ, ಹಬ್ಬಿದಾ ಮಲೆ ಮಧ್ಯದೊಳಗೆ ಕಥಾ ಸಂಕಲನ ಮತ್ತು ಲೋಕದ ಡೊಂಕು ಆಧುನಿಕ ವಚನಗಳು ಇವು ಫೈಜ್ನಟ್ರಾಜ್ ರವರ ಇತರ ಪ್ರಕಟಿತ ಕೃತಿಗಳು.

ಸೈಯದ್ ಫೈಜುಲ್ಲಾ ಮೂಲ ಹೆಸರಾದರೂ ಸಾಹಿತ್ಯಿಕ ಸ್ಪೂರ್ತಿ ನೀಡಿದ ಗೆಳೆಯ ನಟರಾಜ್ ರವರ ಹೆಸರನ್ನು ಸೇರಿಸಿಕೊಂಡು ಸಂತೆಬೆನ್ನೂರು ಫೈಜ್ನಟ್ರಾಜ್ ಕಾವ್ಯನಾಮದೊಂದಿಗೆ ಬರೆಯುತ್ತಿರುವ ಇವರು ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ತಮ್ಮ ಶಾಲೆಯಲ್ಲಿ ಅಂಗಳದ ಹೂವುಗಳು ಕೈ ಬರಹದ ಗೋಡೆ ಮಾಸ ಪತ್ರಿಕೆ ಮತ್ತು ಮಕ್ಕಳ ಕನ್ನಡ ಭಾಷಾ ಬಳಗ ಹುಟ್ಟು ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಕನ್ನಡದ ಕೆಲಸಗಳಿಗೆ ಹಚ್ಚುತ್ತಿದ್ದಾರೆ.

ಸಂಚಯ ಕಾವ್ಯ ಪುರಸ್ಕಾರ, ಹಾಮಾನಾ ಕಥಾ ಪುರಸ್ಕಾರ, ಸ್ನೇಹಶ್ರೀ ಪ್ರಶಸ್ತಿ, ಮತ್ತು ಇತ್ತೀಚೆಗೆ ಬಂದಿರುವ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಇವು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಫೈಜ್ನಟ್ರಾಜ್ ರಿಗೆ ಸಂದಿರುವ ಗೌರವ ಪುರಸ್ಕಾರಗಳು. ಮಹಾರಾಷ್ಟ್ರದ ಶಿಕ್ಷಣ ಇಲಾಖೆಯ ಪಠ್ಯದಲ್ಲಿ ಇವರ ಕಥೆಯೊಂದು ಪಠ್ಯವಾಗಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ.

ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಜುಲೈ 24ರಂದು ದಾವಣಗೆರೆಯಲ್ಲಿ ನಡೆಯಲಿರುವ ಈದ್ ಕಿ ಖುಷಿ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಪ್ರಶಸ್ತಿಗೆ 37 ಕೃತಿಗಳು ಬಂದಿದೆ. ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿ, ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್ ಹಾಗೂ ಸಾಹಿತಿ, ಕವಿ ಡಾ. ಅಮೀರುದ್ದೀನ್ ಖಾಝಿ, ಬಿಜಾಪುರ ತೀರ್ಪುಗಾರರಾಗಿ ಸಹಕರಿಸಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...