ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯದ ಬಗ್ಗೆ ಪಾಶ್ಚಿಮಾತ್ಯ ಹಾಗೂ ಐರೋಪ್ಯ ಒಕ್ಕೂಟದ ಕೆಲವು ಮಾಧ್ಯಮಗಳಲ್ಲಿ ಸಂಶ ಯಾತ್ಮಕವಾದ ವರದಿಗಳು ಪ್ರಕಟವಾಗುತ್ತಿವೆ.
ಅದಕ್ಕೆ ಸೇರ್ಪಡೆ ಎಂಬಂತೆ ವರದಿಯೊಂದು ಪ್ರಕಟ ವಾಗಿದೆ.
ಅದರ ಪ್ರಕಾರ ಪುಟಿನ್ ಅವರಿಗೆ ನಿಂತುಕೊಂಡು ಮಾತನಾಡಲು ಅಸಾಧ್ಯವಾಗುತ್ತಿದೆ. ಕಳೆದ ಭಾನುವಾರ ನಡೆದಿದ್ದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವೀಡಿಯೋದಲ್ಲಿ ಭಾಷಣ ಮಾಡುತ್ತಿರಬೇಕಾದರೆ, ಅವರ ಕಾಲುಗಳು ನಡುಗುತ್ತಿದ್ದದ್ದು ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಪುಟಿನ್ ಅವರಿಗೆ ಹೆಚ್ಚಿನ ಸಮಯದ ವರೆಗೆ ನಿಂತುಕೊಂಡು ಭಾಷಣ ಮಾಡುವ ಕಾರ್ಯಕ್ರಮಗಳಲ್ಲಿ ಮಾತನಾಡುವುದು ಬೇಡ ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಆ ವರದಿಯಲ್ಲಿ ಉಲ್ಲೇಖೀ ಸಲಾಗಿದೆ.
ರಷ್ಯಾ ಸಂಸತ್ ಕ್ರೆಮ್ಲಿನ್ ವಿರೋಧಿಗಳು ಹೊಂದಿರುವ ಟೆಲಿಗ್ರಾಂ ಚಾನೆಲ್ ಮೂಲಕ ಬಂದಿರುವ ವೀಡಿಯೋ ಆಧರಿಸಿ ಈ ಅಂಶವನ್ನು ವರದಿ ಮಾಡಲಾಗಿದೆ. ಫೆ.24ರ ನಂತರ ಉಕ್ರೇನ್ ಮೇಲೆ ಯುದ್ಧ ಸಾರಿದ ನಂತರ ರಷ್ಯಾ ಅಧ್ಯಕ್ಷರ ಆರೋಗ್ಯದ ಬಗ್ಗೆ ಹಲವು ರೀತಿಯ ವರದಿಗಳು ಪ್ರಕಟವಾಗಿದೆ. ಈ ಪೈಕಿ ಒಂದರಲ್ಲಿ ಪುಟಿನ್ ಅವರಿಗೆ ಈಗಾಗಲೇ ಕ್ಯಾನ್ಸರ್ ಇದೆ ಎಂದೂ ಹೇಳಿಕೊಳ್ಳಲಾಗಿತ್ತು. ಆದರೆ, ಈ ಬಗ್ಗೆ ರಷ್ಯಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.