ಬೀದರ್ ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಸಂಚಾರ ಬುಧವಾರ ಆರಂಭವಾಗಲಿದೆ.
ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ. ಬೀದರ್ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿರಲಿದ್ದಾರೆ.
ಸ್ಟಾರ್ ಏರ್ ಸಂಸ್ಥೆಯು ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಾರದಲ್ಲಿ 4 ಬೀದರ್,ಬೆಂಗಳೂರು ಮಧ್ಯೆ ವಿಮಾನ ಯಾನ ಸೇವೆ ಒದಗಿಸಲಿದೆ.
ಒಂದು ಬದಿಗೆ ಒಂದು, ಇನ್ನೊಂದು ಬದಿಗೆ 2 ಆಸನಗಳಿರುವ ವಿಮಾನದಲ್ಲಿ ಒಟ್ಟು 50 ಜನ ಸಂಚರಿಸಬಹುದಾಗಿದೆ. 50 ನಿಮಿಷಗಳಲ್ಲಿ ಬೀದರ್ ನಿಂದ ಬೆಂಗಳೂರಿಗೆ ತಲುಪಲಿದೆ. ಪ್ರಯಾಣ ವೆಚ್ಚ 2,599 ರೂಪಾಯಿ ವೆಚ್ಚದ ಆಗಿದೆ.
ಜಿಲ್ಲಾ ಆಡಳಿತವು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ, ವಿಮಾನ ಸೇವೆ ಆರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ವಿಮಾನದಲ್ಲಿ ಮೊದಲು ಟಿಕೆಟ್ ಬುಕ್ ಮಾಡಿದವರು ಅತಿಥಿಯಿಂದ ಪ್ರಶಸ್ತಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಮೊದಲು ಬರುವ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಸಿಗಲಿದೆ.
ಮಧ್ಯಾಹ್ನ 2.55ಕ್ಕೆ ವಿಮಾನ ಬೆಂಗಳೂರಿನಿಂದ ಹೊರಟು ಸಂಜೆ 4.05ಕ್ಕೆ ಬೀದರ್‍ಗೆ ಬರಲಿದೆ. ವಿಮಾನಕ್ಕೆ ವಾಟರ್ ಸೆಲ್ಯೂಟ್, ಲೈಟಿಂಗ್ ಲ್ಯಾಂಪ್ ಸ್ವಾಗತ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ.