ಕ್ರೀಡಾಪಟುವಾಗಿ ನಾನು ಭಾರತವನ್ನು ಪ್ರತಿನಿಧಿಸುತ್ತೇನೆ. ನನಗೆ ಹಿಂದೂ-ಮುಸ್ಲಿಂ ಮುಖ್ಯವಲ್ಲ. ನಾನು ಸಮುದಾಯವನ್ನು ಪ್ರತಿನಿಧಿಸುತ್ತಿಲ್ಲ ಬದಲಿಗೆ ನನ್ನ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ವಿಶ್ವ ಚಾಂಪಿಯನ್ ಅವರು ತಿಳಿಸಿದ್ದಾರೆ.
ಇವರ ಸಾಧನೆಗಳಿಗಿಂತ ಇವರ ಧಾರ್ಮಿಕ ಹಿನ್ನೆಲೆಯ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಬಾಕ್ಸರ್ ನಿಖತ್ ಜರೀನ್ ಅವರು ಪ್ರತ್ಯುತ್ತರ ನೀಡಿದ್ದಾರೆ.
ಕ್ರೀಡಾಕೂಟಗಳಲ್ಲಿ ಮಾನಸಿಕ ಒತ್ತಡವನ್ನು ನಿಭಾಯಿಸಲು ಬೆಂಬಲದ ಅಗತ್ಯ. ನಮ್ಮ ಭಾರತೀಯ ಬಾಕ್ಸರ್‌ಗಳು ತುಂಬಾ ಪ್ರತಿಭಾವಂತರು, ನಾವು ಯಾರಿಗೂ ಕಡಿಮೆ ಇಲ್ಲ. ನಮ್ಮಲ್ಲಿ ಶಕ್ತಿ, ವೇಗ ಮತ್ತು ಶಕ್ತಿ..ಎಲ್ಲವೂ ಇದೆ ಎಂದಿದ್ದಾರೆ.
ಜರೀನ್ ಅವರು ಕಳೆದ ತಿಂಗಳು ಟರ್ಕಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಫ್ಲೈವೇಟ್ ವಿಭಾಗದಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುತಾಮಾಸ್ ಅವರನ್ನು 5-0 ಅಂತರದಿಂದ ಸೋಲಿಸಿ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ ಐದನೇ ಭಾರತೀಯ ಮಹಿಳೆಯಾಗಿದ್ದಾರೆ.
ಕಳೆದ ತಿಂಗಳು ಫ್ಲೈವೇಟ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡ ಜರೀನ್, ಜುಲೈ 28 ರಿಂದ ಪ್ರಾರಂಭವಾಗುವ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ಗೆ ಸಹ ಸ್ಥಾನ ಪಡೆದಿದ್ದಾರೆ.