Wednesday, October 2, 2024
Wednesday, October 2, 2024

ಭಾರತ ತನ್ನ ಅಣ್ವಸ್ತ್ರ ದಾಸ್ತಾನು ಹೆಚ್ಚಿಸಿಕೊಂಡಿದೆ

Date:

ಭಾರತ ತನ್ನ ಅಣ್ವಸ್ತ್ರಗಳ ದಾಸ್ತಾನನ್ನು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿಸಿಕೊಂಡಿದೆ ಎಂಬ ರಹಸ್ಯ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಚೀನಾ ಮತ್ತು ಪಾಕಿಸ್ತಾನ ಈ ಅವಧಿಯಲ್ಲಿ ತಮ್ಮಲ್ಲಿರುವ ಅಣು ಬಾಂಬ್‌ಗಳ ದಾಸ್ತಾನಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂದೂ ವರದಿಯಾಗಿದೆ.

ಜಗತ್ತಿನಲ್ಲಿ ಅಣ್ವಸ್ತ್ರಗಳನ್ನು ಹೊಂದಿರುವ ಒಂಭತ್ತು ದೇಶಗಳಿವೆ. ಅವು ಅಮೆರಿಕ, ರಷ್ಯಾ, ಬ್ರಿಟನ್‌, ಫ್ರಾನ್ಸ್‌, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್‌ ಮತ್ತು ಉತ್ತರ ಕೊರಿಯಾ. ಈ ದೇಶಗಳು ತಮ್ಮಲ್ಲಿರುವ ಅಣ್ವಸ್ತ್ರಗಳ ಸಂಖ್ಯೆಯನ್ನು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ, ಇವು ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ಕೈಗೊಳ್ಳುವ ಚಟುವಟಿಕೆಗಳ ಮೇಲೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಕಣ್ಣಿಟ್ಟಿರುತ್ತವೆ. ಅಂತಹ ಒಂದು ಸಂಸ್ಥೆಯಾಗಿರುವ ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್ ರ್ ಎಂಬ ಸಂಸ್ಥೆಯು ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ ಭಾರತವು 2021ರ ಜನವರಿಯಲ್ಲಿ 156 ಅಣು ಬಾಂಬ್‌ಗಳನ್ನು ಹೊಂದಿತ್ತು. ಆದರೆ, 2022ರ ಜನವರಿಯಲ್ಲಿ 160 ಅಣು ಬಾಂಬ್‌ಗೆ ತನ್ನ ದಾಸ್ತಾನು ಹೆಚ್ಚಿಸಿಕೊಂಡಿದೆ ಎಂದು ಹೇಳಿದೆ.

ಚೀನಾದಲ್ಲಿ 2021ರಲ್ಲಿ 350 ಅಣು ಬಾಂಬ್‌ ಇದ್ದವು. 2022ರಲ್ಲೂ ಅಷ್ಟೇ ಇವೆ. ಪಾಕಿಸ್ತಾನದಲ್ಲಿ 2021ರಲ್ಲಿ 165 ಅಣು ಬಾಂಬ್‌ ಇದ್ದವು, 2022ರಲ್ಲೂ ಅಷ್ಟೇ ಇವೆ. ಪಾಕ್‌ನಲ್ಲಿ ಅಣ್ವಸ್ತ್ರಗಳ ಸಂಖ್ಯೆ ಅಷ್ಟೇ, ಇದ್ದರೂ ಅಣು ಬಾಂಬ್‌ಗಳನ್ನು ಎಸೆಯುವ ಹೊಸ ರೀತಿಯ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಭಾರತವೂ ಈ ಕಾರ್ಯ ಮಾಡಿದೆ. ಆದ್ದರಿಂದ, ಭಾರತ ಮತ್ತು ಪಾಕ್‌ ತಮ್ಮ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂಬುದು ಉಪಗ್ರಹ ಚಿತ್ರದಿಂದ ಪತ್ತೆಯಾಗಿದೆ. ಚೀನಾ ಅಂತಹ ವಿಸ್ತರಣೆಗೆ ಕೈಹಾಕಿರುವುದು ಪತ್ತೆಯಾಗಿಲ್ಲ ಎಂದು ಎಸ್‌ಐಪಿಆರ್‌ಐ ತಿಳಿಸಿದೆ.

ಭಾರತದ ಗಡಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ನಿರಂತರವಾಗಿ ಕ್ಯಾತೆ ತೆಗೆಯುವುದರಿಂದ ಅಣ್ವಸ್ತ್ರಗಳ ದಾಸ್ತಾನು ಹಾಗೂ ವಿಸ್ತರಣೆ ಕಾರ್ಯಾಚರಣೆಗಳ ಕುರಿತಾದ ಅಂಕಿಅಂಶಗಳು ಮಹತ್ವ ಪಡೆದಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Youth Empowerment and Sports ಸುತ್ತಮುತ್ತಲ ಪ್ರದೇಶದ ಸ್ಬಚ್ಛತೆ ನಮ್ಮ ಜವಾಬ್ದಾರಿ- ಶಾಸಕ ಚನ್ನಬಸಪ್ಪ

 Youth Empowerment and Sports ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು...

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...