ಬೆಂಗಳೂರಿನಲ್ಲಿ ವಿಶೇಷಚೇತನರು ಇನ್ನು ಮುಂದೆ ಬಿಎಂಟಿಸಿ ಬಸ್ ಗಳಲ್ಲಿ ಯಾರ ಸಹಾಯವಿಲ್ಲದೇ ಓಡಾಡಬಹುದಾಗಿದೆ. ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಚೇತನರಿಗೆ ಪ್ರಯಾಣವನ್ನು ಸುಲಭವಾಗಿಸಲು ಗಾಲಿಕುರ್ಚಿಗಳನ್ನು ಮೇಲೆತ್ತಬಹುದಾದ ಸೌಲಭ್ಯವುಳ್ಳ 300 ಎಸಿ ರಹಿತ ಎಲೆಕ್ಟ್ರಿಕ್ ಬಸ್‌ಗಳ ಸೌಲಭ್ಯ ನೀಡಲು ನಿರ್ಧರಿಸಿದೆ.
ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ 2ನೇ ಯೋಜನೆಯಡಿ ಬಿಎಂಟಿಸಿ ಉದ್ದೇಶದಂತೆ ನಾನ್ ಎಸಿ 300 ಬಸ್ ಪೈಕಿ ಒಂದಷ್ಟು ಬಸ್ ಗಳನ್ನು ಈಗಾಗಲೇ ಖರೀದಿಸಿದೆ
ಬಸ್‌ಗಳು ಬೆಂಗಳೂರು ನಗರದ ರಸ್ತೆಗೆ ಇಳಿಯಲಿವೆ. ಈ ಬಸ್‌ಗಳಲ್ಲಿನ ವ್ಹೀಲ್ ಚೇರ್ ಲಿಫ್ಟಿಂಗ್ ವ್ಯವಸ್ಥೆಯ ನಿರ್ವಹಣೆಯನ್ನು ಬಿಎಂಟಿಸಿ ಸಿಬ್ಬಂದಿಯೇ ನಿರ್ವಹಸಲಿದ್ದಾರೆ ಎಂದು ಸಂಸ್ಥೆ ಮೂಲಗಳು ತಿಳಿಸಿದೆ.