ಭಾರತವು ವಾಸ್ತು ಶಿಲ್ಪದ ಕಲೆ ಬೀಡು. ಇಲ್ಲಿನ ಕಲೆ, ಶಿಲ್ಪಗಳಿಗೆ, ಪುರಾತನ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಹಿಂದೆ ರಾಜರ ಆಳ್ವಿಕೆ ಕಾಲದಿಂದ ಹಿಡಿದು ಸ್ವಾತಂತ್ರ್ಯ ಪೂರ್ವದವರೆಗೂ ಭಾರತದ ಅನೇಕ ಪರಂಪರಾಗತ ವಸ್ತುಗಳು ವಿದೇಶಿಯರ ಕೈ ವಶವಾಗಿದ್ದವು.
ಇದರಲ್ಲಿ ಕೆಲವೊಂದನ್ನು ವಶಪಡಿಸಿಕೊಂಡರೆ, ಇನ್ನೂ ಕೆಲವು ಕಳುವಾಗಿ ಅವರ ಪಾಲಾಗಿದ್ದವು. ಸ್ವಾತಂತ್ರ್ಯದ ನಂತರವೂ ಪುರಾತನ ವಸ್ತುಗಳು ಭಾರತದಿಂದ ಕಾಣೆಯಾಗಿವೆ. ಇಂತರಹದ್ದಲ್ಲಿ ಪ್ರಮುಖವಾದದ್ದು ಕೋಹಿನೂರ್ ವಜ್ರ. ಇದು ಭಾರತಕ್ಕೆ ಸೇರಿದ್ದು ಎಂದು ಹೇಳಲಾಗುತ್ತದೆ. ಪ್ರಸ್ತುತ ಅದು ಬ್ರಿಟನ್ ನಲ್ಲಿದೆ.
ಕೆಲವು ಕಿಡಿಗೇಡಿಗಳು ದೇವಾಲಯದಲ್ಲಿ ಮೂರ್ತಿಗಳನ್ನು ಕದ್ದು ಮಾರಾಟ ಮಾಡಿರುವುದು ಕೂಡ ಇದೆ. ಇಂತಹ ಕೆಲವು ದೇವರ ವಿಗ್ರಹಗಳು ವಿದೇಶಕ್ಕೆ ರವಾನೆ ಕೂಡ ಆಗುತ್ತವೆ. ಆದ್ದರಿಂದ, ಹಳೆಯ ಅನೇಕ ವಸ್ತುಗಳು ವಿದೇಶದ ನೆಲದಲ್ಲಿ ಇಂದಿಗೂ ಇವೆ ಎಂದು ಹೇಳಬಹುದು. ಈ ನಿಮಿತ್ತ ಭಾರತ ಸರ್ಕಾರವು ಅವುಗಳನ್ನು ತಾಯ್ನಾಡಿಗೆ ಮರಳಿ ತರುವ ಕೆಲಸವನ್ನು ಈವರೆಗೂ ನಡೆಸುತ್ತಲೇ ಇದೆ. ಕಳೆದ ವಾರವಷ್ಟೇ ತಮಿಳುನಾಡು ಮೂಲದ ಹಲವಾರು ದೇವರ ಮೂರ್ತಿಗಳನ್ನು ಕೇಂದ್ರ ವಿದೇಶದಿಂದ ಹಿಂಪಡೆದಿದೆ.
ದ್ವಾರಪಾಲ,ನಟರಾಜ,ಕಂಕಲಮೂರ್ತಿ, ನಂದಿಕೇಶ್ವರ,ನಾಲ್ಕು ತೋಳುಗಳ ವಿಷ್ಣು, ಪಾರ್ವತಿ ದೇವಿ,ನಿಂತಿರುವ ಮಗು ಸಂಬಂಧರ್ ಹೀಗೆ ಮುಂತಾದ ವಿಗ್ರಹಗಳು ಕಳುವು ಆಗಿತ್ತು. ಈಗ ಭಾರತಕ್ಕೆ ಇವುಗಳು ಹಿಂದಿರುಗಿವೆ.
