ನರೇಂದ್ರ ಮೋದಿ ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ ವಿಶ್ವದಲ್ಲಿ ಭಾರತದ ಗೌರವವನ್ನು ಮರುಸ್ಥಾಪಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.
ಐಎನ್‌ಎಸ್ ಖುಕ್ರಿ ಯುದ್ಧ ಸ್ಮಾರಕ ಸೇರಿದಂತೆ ವಿವಿಧ ಯೋಜನೆಗಳನ್ನ ಉದ್ಘಾಟಿಸಿ ಮಾತನಾಡಿದರು.
ದಿಯುನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ‘ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನವನ್ನು ಹೇಗೆ ಬಳಸಿದ್ದಾರೆ ಎಂದು ಅನೇಕ ದೇಶಗಳು ಕೇಳುತ್ತಿವೆ, ಇದರ ಮೂಲಕ 130 ಕೋಟಿ ಜನರು ಯಾವುದೇ ಗೊಂದಲವಿಲ್ಲದೆ ಕೋವಿಡ್ -19 ಲಸಿಕೆಗಳ ಎರಡೂ ಡೋಸ್ಗಳನ್ನು ಸ್ವೀಕರಿಸಿದರು ಮತ್ತು ದೇಶವನ್ನ ಕೊರೊನಾ ವೈರಸ್‌ನಿಂದ ಮುಕ್ತಗೊಳಿಸಿದರು’ ಎಂದು ಅವರು ಹೇಳಿದರು.
2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮೋದಿ ಸರ್ಕಾರದ ಸಾಧನೆಗಳನ್ನ ಪಟ್ಟಿ ಮಾಡಿದ ಶಾ, ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ಕೇವಲ 45 ದಿನಗಳಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆಯು ಹತ್ತು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಖಚಿತಪಡಿಸಿದ್ದಾರೆ ಎಂದು ಹೇಳಿದರು.
ಕೋವಿಡ್ -19 ವಿರುದ್ಧ ಲಸಿಕೆ ಪಡೆದ ಮೂರು ಸೆಕೆಂಡುಗಳಲ್ಲಿ ಭಾರತದ ಜನರು ತಮ್ಮ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.
ಆದರೆ, ಅಭಿವೃದ್ಧಿ ಹೊಂದಿದ ದೇಶಗಳ ಜನರು ಸಹ ಸಮಯಕ್ಕೆ ಸರಿಯಾಗಿ ತಮ್ಮ ಕೋವಿಡ್ ಪ್ರಮಾಣಪತ್ರಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ತನ್ನ 58 ವರ್ಷಗಳ ಆಡಳಿತದಲ್ಲಿ ಬಡತನವನ್ನ ತೊಡೆದುಹಾಕುವ ಹೆಸರಿನಲ್ಲಿ ಬಡವರನ್ನ ತೆಗೆದು ಹಾಕಿತು. ಆದ್ರೆ, ಪ್ರಧಾನಿ ಮೋದಿ ಕಳೆದ ಎಂಟು ವರ್ಷಗಳಲ್ಲಿ ಬಡತನವನ್ನ ತೊಡೆದುಹಾಕಲು ಶ್ರಮಿಸಿದರು ಎಂದು ಹಿರಿಯ ಬಿಜೆಪಿ ನಾಯಕ ಹೇಳಿದರು.
50 ವರ್ಷಗಳ ನಂತರವೂ, ಸಾಂಕ್ರಾಮಿಕ ರೋಗವು ಅಪ್ಪಳಿಸಿದರೆ, ಒಂದು ಲೀಟರ್ ಆಮ್ಲಜನಕವನ್ನು ಸಹ ವಿದೇಶದಿಂದ ಪಡೆಯಬೇಕಾಗಿಲ್ಲ. ಪಿಎಂ ಕೇರ್ ಮೂಲಕ, ಮೋದಿ ಆರೋಗ್ಯ ಮೂಲಸೌಕರ್ಯವನ್ನು ನಿರ್ಮಿಸಿದ್ದಾರೆ ಮತ್ತು ಪ್ರತಿ ಗ್ರಾಮವನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ ಎಂದರು.