ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಜೊತೆಯಲ್ಲಿ ಜೂನ್ 9 ರಂದು ಸಂಜೆ ಶರಾವತಿನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ದತ್ತಿ ನಿಧಿ ಕಾರ್ಯಕ್ರಮ ನಡೆಯಿತು.
ದತ್ತಿ ದಾನಿಗಳಾದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಿವಮೊಗ್ಗ ಶಾಖಾ ಮಠವು ನೀಡಿರುವ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಪುರಸ್ಕೃತ ಭೈರವೈಕ್ಯ ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ದತ್ತಿ ಅಂಗವಾಗಿ ನಿರ್ಮಲ ಧರ್ಮ- ರಾಜ್ಯ ಪಾಲನೆ ವಿಚಾರವಾಗಿ ಸಾಹಿತಿಗಳು, ಕಡೂರು ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ರಾದ ಡಾ. ದೊರೇಶ್ ಅವರು ಮಾತನಾಡಿದರು.

ಸಂಗೀತ ಕ್ಷೇತ್ರಕ್ಕೆ ದೇವಂಗಿ ಟಿ. ಚಂದ್ರಶೇಖರ್ ಕೊಡುಗೆ ವಿಚಾರವಾಗಿ ಡಾ. ಡಿ.ಸಿ. ಚಿತ್ರಾ ಶ್ರೀನಿವಾಸ ಮಾತನಾಡಿದರು. ಗಾಯಕ ಆನಂದಪುರದ ಭದ್ರಪ್ಪಗೌಡ ಅವರು ಹಲವು ಗೀತೆಗಳನ್ನು ಹಾಡಿದರು. ಕಡಿದಾಳು ಮಂಜಪ್ಪ ಅವರನ್ನು ಕುರಿತು ಪ್ರೊ. ಜೆ. ಎಲ್ ಪದ್ಮನಾಭ ಅವರು ಮಾತನಾಡಿದರು.
ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ ಅವರು ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಿ.ಸಿ. ಮೈತ್ರೇಯ ಉಪಸ್ಥಿತರಿದ್ದರು. ಕಸಾಪದ ಮೂವತ್ತು ಕಲಾವಿದರು ಸಾಮೂಹಿಕವಾಗಿ ನಾಡಗೀತೆಯನ್ನು ಹಾಡಿದರು. ತಾ. ಕಸಾಪ ಅಧ್ಯಕ್ಷರಾದ ಮಹಾದೇವಿ ಸ್ವಾಗತಿಸಿದರು.
ಉಪನ್ಯಾಸಕಿ ಸುಜಾತಾ ನಿರೂಪಿಸಿದರು. ಬಿ. ಟಿ. ಅಂಬಿಕಾ ವಂದಿಸಿದರು. ಎಂ. ನವೀನ್ ಕುಮಾರ್, ಡಿ. ಗಣೇಶ್, ಶಿವಪ್ಪಗೌಡ, ಎಂ. ಎಂ. ಸ್ವಾಮಿ ಸೇರಿದಂತೆ ಹಲವರು ವಿವಿಧ ಕಾರ್ಯಗಳನ್ನು ನೆರವೇರಿಸಿದರು.