Tuesday, November 26, 2024
Tuesday, November 26, 2024

ಸಮರದಲ್ಲಿ ಸಪ್ಪಗಾದ ರಷ್ಯ:ಚೇತರಿಕೆಗೆ ನಿಧಿ ಸಂಗ್ರಹದತ್ತ ಉಕ್ರೇನ್

Date:

ನಮ್ಮ ಸರ್ಕಾರ ಸೈನ್ಯಕ್ಕೆ ಧನಸಹಾಯ ನೀಡಲು ಹಾಗೂ ಯುದ್ಧದಿಂದ ನಾಶವಾದ ನಗರಗಳು ಮತ್ತು ಪಟ್ಟಣಗಳನ್ನು ಪುನಃ ನಿರ್ಮಿಸಲು ಹಣ ಸಂಗ್ರಹಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಿಳಿಸಿದ್ದಾರೆ.

ರಷ್ಯಾದ ಪಡೆಗಳನ್ನು ಹೊರಹಾಕಿದ ಸ್ಥಳಗಳಲ್ಲಿ ವಿದ್ಯುತ್, ಅನಿಲ, ನೀರು ಮತ್ತು ಫೋನ್ ಸೇವೆಯನ್ನು ಪುನಃಸ್ಥಾಪಿಸಲು ಈಗಾಗಲೇ ಕೆಲಸ ನಡೆಯುತ್ತಿದೆ. ಆಸ್ಪತ್ರೆಗಳನ್ನು ಮರು ಸಜ್ಜುಗೊಳಿಸಲು ಹಾಗೂ ಬಂಕರ್​​‌ಗಳನ್ನು ತೆಗೆದುಹಾಕಲು ಹೆಚ್ಚಿನ ಕಾರ್ಯ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮೊದಲ ತಿಂಗಳಲ್ಲಿ $50 ಮಿಲಿಯನ್‌ಗಿಂತಲೂ ಹೆಚ್ಚು ನೆರವು ಹರಿದು ಬಂದಿದೆ. ಉಕ್ರೇನ್​​ ಟೆನಿಸ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಹಾಗೂ ಮಾಜಿ ಸಾಕರ್ ಆಟಗಾರ ಆಂಡ್ರಿ ಶೆವ್ಚೆಂಕೊ ಅವರನ್ನು ನಿಧಿಸಂಗ್ರಹ ವೇದಿಕೆಗೆ ರಾಯಭಾರಿಯಾಗಿದ್ದಾರೆ ಎಂದು ಝೆಲೆನ್ಸ್ಕಿ ಅವರು ತಿಳಿಸಿದ್ದಾರೆ.

ಕಳೆದ ದಿನದಿಂದ ಪೂರ್ವ ಡಾನ್​ಬಾಸ್​ ಪ್ರದೇಶದಲ್ಲಿ ರಷ್ಯಾದ ಪಡೆಗಳು ಯಾವುದೇ ಮಹತ್ವದ ಪ್ರಗತಿಯನ್ನು ಸಾಧಿಸಿಲ್ಲ. ಈ ಪ್ರದೇಶದಲ್ಲಿ ಸೈನಿಕರ ರಕ್ಷಣಾ ಕಾರ್ಯ ಮುಂದುವರೆದಿದೆ. ರಷ್ಯನ್ನರು ಸ್ಪಷ್ಟವಾಗಿ ಇಷ್ಟೊಂದು ಪ್ರತಿರೋಧವನ್ನು ಎದುರಿಸುತ್ತೇವೆ ಎಂದು ನಿರೀಕ್ಷಿಸಿರಲಿಲ್ಲ.

ರಷ್ಯಾದ ಸೈನ್ಯವು ಎಸಗಿದ ಯುದ್ಧಾಪರಾಧಗಳ ಬಗ್ಗೆ ದೃಢಪಡಿಸಿದ ಮಾಹಿತಿಯೊಂದಿಗೆ ಉಕ್ರೇನ್ ಮುಂದಿನ ವಾರ ವಿಶೇಷ ಬುಕ್ ಆಫ್ ಎಕ್ಸಿಕ್ಯೂಶನರ್ಸ್ ಅನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂದು ಇದೇ ವೇಳೆ ಉಕ್ರೇನ್​​ ಅಧ್ಯಕ್ಷರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...