ಆರ್‌ಎಸ್‌ಎಸ್ ಒಂದು ದೇಶ ಭಕ್ತಿ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಹುಬ್ಬಳ್ಳಿಯ ಆದರ್ಶನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಯಾವುದೇ ಸಂಘಟನೆಗೆ ಬದ್ಧತೆ ಇಲ್ಲ. ಆರ್‌ಎಸ್‌ಎಸ್ ರಾಷ್ಟ್ರದ ಸಂಘಟನೆ, ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಷ್ಟು ವರ್ಷ ಸಾರ್ವಜನಿಕ ಜೀವನದಲ್ಲಿದ್ದವರು ಈ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.
ಪಿಎಫ್‍ಐ, ಎಸ್‍ಡಿಪಿಐ, ಮುಸ್ಲಿಂ ಲೀಗ್ ಮೇಲೆ ಪ್ರೀತಿ ಬರುತ್ತೆ. ಅವರೆಲ್ಲರೂ ಇವರಿಗೆ ಜಾತ್ಯಾತೀತರಾಗಿ ಕಾಣುತ್ತಾರೆ. ಆದರೆ, ಆರ್‌ಎಸ್‌ಎಸ್ ಬಗ್ಗೆ ದ್ವೇಷ ಇಟ್ಟುಕೊಳ್ಳಬಾರದು. ಅವರು ಆರ್‌ಎಸ್‌ಎಸ್ ಅನ್ನು ಅರ್ಥ ಮಾಡಿಕೊಳ್ಳಬೇಕು. ಆಗ, ಅವರಿಗೆ ದೇಶ ಭಕ್ತಿ ಅಂದರೆ ಏನು ಅಂತಾ ಗೊತ್ತಾಗುತ್ತದೆ. ದೇಶದಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.
