ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗೋವಾದ ಜನತೆಗೆ ಅವರ ರಾಜ್ಯ ಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ. ರಾಜ್ಯದ ಶ್ರೀಮಂತ ಸಂಸ್ಕೃತಿಯು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
ಗೋವಾ, ದಮನ್ ಹಾಗೂ ದಿಯು ಕೇಂದ್ರಾಡಳಿತ ಪ್ರದೇಶದ ಭಾಗವಾಗಿದ್ದ ಗೋವಾಕ್ಕೆ 1987 ರಲ್ಲಿ ಇದೇ ದಿನದಂದು ರಾಜ್ಯ ಸ್ಥಾನಮಾನ ನೀಡಲಾಯಿತು.
ಗೋವಾ ರಾಜ್ಯ ಸ್ಥಾಪನಾ ದಿನದಂದು ಎಲ್ಲಾ ಗೋವಾ ಪ್ರಜೆಗಳಿಗೆ ಶುಭಾಶಯಗಳು. ಭಾರತದ ಕೆಲವು ಸುಂದರವಾದ ಸ್ಥಳಗಳಿಗೆ ನೆಲೆಯಾಗಿರುವ ಗೋವಾ ರಾಜ್ಯ, ಶ್ರೀಮಂತ ಉತ್ಕೃಷ್ಟ ಸಂಸ್ಕೃತಿಯನ್ನು ಹೊಂದಿದೆ. ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.
ಅಭಿವೃದ್ಧಿ ನಿಯತಾಂಕಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಅದರ ನಿರಂತರ ಪ್ರಗತಿ ಹಾಗೂ ಸಮೃದ್ಧಿಗೆ ಶುಭ ಹಾರೈಕೆಗಳು ಎಂದು ರಾಮನಾಥ್ ಕೋವಿಂದ್ ಅವರು ಟ್ವೀಟ್ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
