ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ ಹೊಸದಾಗಿ 54 ಕರೋನಾ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.
ಬೀಜಿಂಗ್ ಪುರಸಭೆಯ ಆರೋಗ್ಯ ಆಯೋಗದ ಪ್ರಕಾರ, ಬೀಜಿಂಗ್ನಲ್ಲಿ ಶನಿವಾರ 14 ಹೊಸ ಕೇಸ್ಗಳು ವರದಿಯಾಗಿವೆ.
ಶಾಂಘೈನಲ್ಲಿ 29 ಮತ್ತು ಬೀಜಿಂಗ್ನಲ್ಲಿ 14 ಕೇಸ್ಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.
ಇನ್ನು ಕೋವಿಡ್ನಿಂದ 50 ಸೋಂಕಿತರು ಚೇತರಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಚೀನಾದಲ್ಲಿ ಶನಿವಾರ ಕೋವಿಡ್ನಿಂದ ಚೇರಿಸಿಕೊಂಡ 252 ಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಚೀನಾದಲ್ಲಿ ಸೋಂಕಿತರ ಸಂಖ್ಯೆ ಸುಮಾರು 215,860 ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಇದರಲ್ಲಿ ಏಳು ಲಕ್ಷಣರಹಿತ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.