Tuesday, March 24, 2026
Tuesday, March 24, 2026

ಈಗ ಪಶ್ಚಿಮ ದೇಶಗಳು ರಷ್ಯದ ಮೇಲೆ ಸಾಂಸ್ಕೃತಿಕ ನಿಷೇಧ ಹೇರುತ್ತಿವೆ

Date:

ಉಕ್ರೇನ್ ಮೇಲೆ ಆಕ್ರಮಣ ನಡೆಸಿ ಇಡೀ ವಿಶ್ವ ಸಮುದಾಯದ ಟೀಕೆಗೆ ಗುರಿಯಾಗಿರುವ ರಷ್ಯಾ ಮಾತ್ರ ತನ್ನಿಂದ ಪ್ರಮಾದವಿದೆ ಅಂತ ಅಂಗೀಕರಿಸುತ್ತಿಲ್ಲ. ತಾನು ಮಾಡಿದ್ದು ಸರಿ ಬೇರೆ ದೇಶಗಳು ಮಾಡಿದ್ದು ತಪ್ಪು ಎನ್ನುವ ರಷ್ಯಾದ ಧೋರಣೆ ಹಾಸ್ಯಾಸ್ಪದವಾಗಿದೆ. ಇದನ್ನು ಯಾಕೆ ಹೇಳಬೇಕಾಗಿದೆ ಎಂದರೆ ಉಕ್ರೇನ್ ವಿರುದ್ದ ರಷ್ಯಾ ಮಿಲಿಟರಿ ಕಾರ್ಯಾಚರಣೆ ಮಂದುವರಿಸಿರುವಂತೆಯೇ, ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೇಯಿ ಲವ್ರೋವ್ ಅವರು ಶುಕ್ರವಾರ ಮಾಸ್ಕೋನಲ್ಲಿ ಹೇಳಿಕೆಯೊಂದನ್ನು ನೀಡಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ, ಅದರ ಜನತೆ ಹಾಗೂ ಸಂಸ್ಕೃತಿ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ನಡೆಸುತ್ತಿವೆ ಎಂದು ಹೇಳಿದ್ದಾರೆ.

ಪಶ್ಚಿಮ ರಾಷ್ಟ್ರಗಳ ನಮ್ಮ ಮತ್ತು ರಷ್ಯನ್ ವಿಶ್ವದ ವಿರುದ್ಧ ಯುದ್ಧ ಘೋಷಿಸಿವೆ. ರಷ್ಯಾ ಹಾಗೂ ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ಆಯಾಮದ ಜೊತೆ ಇರುವ ಸಂಬಂಧವನ್ನು ರದ್ದು ಮಾಡುತ್ತಿರುವ ಪಶ್ಚಿಮ ರಾಷ್ಟ್ರಗಳ ಸಂಸ್ಕೃತಿ ಅತಾರ್ಕಿಕ ಹಂತವನ್ನು ತಲುಪಿದೆ ಎಂದು ಸಚಿವಾಲಯದ ಸಭೆಯೊಂದರಲ್ಲಿ ಲವ್ರೋವ್ ಅವರು ಹೇಳಿದ್ದಾರೆ.

ರಷ್ಯನ್ ಸಾಹಿತಿಗಳು, ಸಂಗೀತಕಾರರು ಮತ್ತು ಸಾಂಸ್ಕೃತಿಕ ಜಗತ್ತಿಗೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಪಶ್ಚಿಮ ರಾಷ್ಟ್ರಗಳು ನಿಷೇಧ ಹೇರುತ್ತಿವೆ ಎಂದು ಅವರು ಅರೋಪಿಸಿದ್ದಾರೆ.

ಈ ಸ್ಥಿತಿ ಬಹಳ ಸಮಯದವರೆಗೆ ಮುಂದುವರಿಯಲಿದೆ. ಅದರೊಂದಿಗೆ ನಾವು ಏಗಲೇಬೇಕು ಅಂತ ನಾನು ಅನುಮಾನವಿಲ್ಲದೆ ಹೇಳಬಲ್ಲೆ ಎಂದು ಲವ್ರೋವ್ ಅವರು ಹೇಳಿದ್ದಾರೆ.

ನಮ್ಮ ದೇಶದ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನವಾಗಿ ವಾಷಿಂಗ್ಟನ್ ತನ್ನ ಉಪಗ್ರಹಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತಿದೆ. 3 ಪಟ್ಟು ಹೆಚ್ಚಿಸುತ್ತಿದೆ. 4 ಪಟ್ಟು ಹೆಚ್ಚಿಸುತ್ತಿದೆ ಎಂದು ಲವ್ರೋವ್ ಹೇಳಿದ್ದಾರೆ.

ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರಷ್ಯಾದ ಬಗ್ಗೆ ಭಯ ಅನ್ನೋದು ಒಂದು ಅಭೂತಪೂರ್ವ ನೈಸರ್ಗಿಕ ಪ್ರಕ್ರಿಯೆಯಾಗಿ ಗೋಚರವಾಗುತ್ತಿದೆ. ನಾವು ವಿಷಾದಪಡುವ ವಿಷಯ ಏನೆಂದರೆ ಸರ್ಕಾರಿ ವಲಯಗಳಿಂದ ಈ ಪ್ರಕ್ರಿಯೆಗೆ ಉತ್ತೇಜನ ಸಿಗುತ್ತಿದೆ ಎಂದು ಲವ್ರೋವ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...