Tuesday, October 1, 2024
Tuesday, October 1, 2024

ಉಗ್ರರಿಗೆ ನೆರವು ನೀಡಿದ್ದ ಯಾಸಿನ್ ಗೆಜೀವಾವಧಿ ಶಿಕ್ಷೆ: ಪಾಕ್ ಅಪಸ್ವರ

Date:

ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವುದು ಮತ್ತು 2017ರಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣವನ್ನು ಒದಗಿಸುತ್ತಿದ್ದ, ಆರೋಪದಲ್ಲಿ ಕಾಶ್ಮೀರದ ಪ್ರತ್ಯೇಕತಾ ಹೋರಾಟಗಾರ ಯಾಸಿನ್‌ ಮಲ್ಲಿಕ್‌ಗೆ ದೆಹಲಿಯ ಎನ್ಐಎ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿದೆ.

ಇದರ ಜೊತೆಗೆ 10ಲಕ್ಷ ದಂಡ ಹಾಕಿದೆ. ವ್ಯೂಎಪಿಎ ಕಾಯ್ದೆ,1967ರ ಅಡಿಯಲ್ಲಿ ಕೇಸ್‌ ದಾಖಲಾಗಿತ್ತು.ಇಂತಹ 7 ಪ್ರಕರಣಗಳಲ್ಲಿ ತಪ್ಪು ಮಾಡಿರೋದು ದೃಢವಾಗಿತ್ತು. ಕಳೆದ ಅನೇಕ ದಿನಗಳ ಹಿಂದೆ ಅಪರಾಧ ಮಾಡಿರುವ ಬಗ್ಗೆ ಯಾಸಿನ್‌ ಸ್ವತಃ ತಾನೇ ತಪ್ಪನ್ನು ಒಪ್ಪಿಕೊಂಡಿದ್ದ. ನಂತರ ಯಾಸಿನ್‌ಗೆ ಗಲ್ಲು ಶಿಕ್ಷೆ ನೀಡೋದಕ್ಕೆ ಎನ್ಐಎ ತಂಡ ಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ, ಕೋರ್ಟ್‌ ಈಗ ಜೀವನಪರ್ಯಂತ ಸೆರೆವಾಸಕ್ಕೆ ಆಜ್ಞೆ ಕೊಟ್ಟಿದೆ. ಇನ್ನು ತೀರ್ಪು ನೀಡೋದಕ್ಕೂ ಮುಂಚೆ ಯಾಸಿನ್‌ಗೆ ಭಾರಿ ಭದ್ರತೆ ನೀಡಲಾಗಿತ್ತು. ದೆಹಲಿಯ ಕೋರ್ಟ್‌ ಬಳಿ ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳ ಸೇರಿದಂತೆ ಅನೇಕ ಪೊಲೀಸ್ ದಳಗಳಿದ್ದವು.

ಕಾಶ್ಮೀರ ರಾಜಧಾನಿ ಶ್ರೀನಗರದಲ್ಲೂ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್‌ ಘೋಷಿಸಲಾಗಿತ್ತು. ಆದರೂ ಹಲವು ಕಡೆ ಉದ್ರಿಕ್ತ ಗುಂಪುಗಳು ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ನಡೆಸಿವೆ. ಇದಕ್ಕೆ ಪ್ರತಿಯಾಗಿ ಸೇನಾ ಪಡೆಗಳು ಸಹ ಅಶ್ರುವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಪ್ರಯತ್ನಿಸಿವೆ. ಕಾಶ್ಮೀರದ ಕಿಡಿಗೇಡಿಗೆ ಶಿಕ್ಷೆ ಪ್ರಕಟವಾಗಿದೆ.

ಪಾಕಿಸ್ತಾನದಲ್ಲಿ ತಮ್ಮ ಮನೆಮಗನನ್ನೇ ಜೈಲಿಗಟ್ಟಿದ ಸಂಕಟ ಬಂದಿದೆ. ನಿನ್ನೆಯಿಂದ ಕೂಡ ಟ್ವೀಟ್‌ ಮೇಲೆ ಟ್ವೀಟ್‌ ಮಾಡಿ ಭಾರತದ ವಿರುದ್ದ ದ್ವೇಷ ಸಾಧಿಸುತ್ತಿರುವ ಪಾಕಿಸ್ತಾನದವರು ಯಾಸಿನ್‌ನ್ನ ಬಿಡುಗಡೆ ಮಾಡುವಂತೆ ಆಗ್ರಹ ಮಾಡುತ್ತಿದ್ದಾರೆ. ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಾಲ್ ಬುಟ್ಟೋ ಜರ್ಧಾರಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಮುಖ್ಯಸ್ಥೆ ಮಿಚೆಲ್‌ ಬ್ಯಾಚ್ಲೆಟ್‌ಗೆ ಮನವಿ ಮಾಡಿ, ಯಾಸಿನ್ ಬಿಡುಗಡೆಗೊಳಿಸುವಂತೆ ಭಾರತಕ್ಕೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಭಾರತ ಸುಳ್ಳು ಮತ್ತು ಕಪೋಲಕಲ್ಪಿತ ಕಥೆಗಳನ್ನು ಸೃಷ್ಠಿಸಿ ಕಾಶ್ಮೀರ ನಾಯಕರಿಗೆ ಕಿರುಕುಳ ನೀಡುತ್ತಿದೆ. ಅವರನ್ನು ದಮನಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕಡೆ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದ್ ಟ್ವೀಟ್‌ ಮಾಡಿ ಭಾರತ, ಕಾಶ್ಮೀರದ ದನಿಗಳನ್ನು ಅಡಗಿಸೋ ಕೆಲಸವನ್ನು ಮುಂದುವರೆಸಿದೆ. ಅವರ ಮೇಲೆ ಇಲ್ಲಸಲ್ಲದ ಕೇಸ್‌ಗಳನ್ನು ಹಾಕುತ್ತಿದೆ. ಆದರೆ, ಇದರಿಂದ ಕಾಶ್ಮೀರದಲ್ಲಿ ನಡೀತಿರೋ ಸ್ವಾತಂತ್ರ್ಯ ಹೋರಾಟ ನಿಲ್ಲಿಸಲು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...