ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರು ಸ್ತ್ರೀವಾದವು ಪಾಶ್ಚಿಮಾತ್ಯ ಪರಿಕಲ್ಪನೆಯಲ್ಲ. ಆದರೆ ಭಾರತೀಯ ನಾಗರಿಕತೆಯಲ್ಲಿ ಅಂತರ್ಗತವಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.
ದ್ರೌಪದಿ ಮತ್ತು ಸೀತೆಗಿಂತ ದೊಡ್ಡ ಸ್ತ್ರೀವಾದಿ ಬೇರೊಂದಿಲ್ಲ ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಸುಷ್ಮಾ ಸ್ವರಾಜ್ ಸ್ತ್ರೀ ಶಕ್ತಿ ಸಮ್ಮಾನ್ 2022 ಅನ್ನು ನೀಡಿ ಗೌರವಿಸಲಾದ ಸಮಾರಂಭದಲ್ಲಿ ಮಾತನಾಡುತ್ತ ಈ ಬಗ್ಗೆ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಆಧುನಿಕ ಭಾರತದ ಬೌದ್ಧಿಕ ಪ್ರವಚನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಭಾರತೀಯ ಸ್ತ್ರೀವಾದಿಗಳನ್ನು ಅಧ್ಯಯನ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ನಾನು ದಕ್ಷಿಣ ಭಾರತದಿಂದ ಬಂದಿದ್ದೇನೆ. ಅಲ್ಲಿ ಕಾನಂಗಿ ಹಾಗೂ ಮಣಿಕೆಕ್ಲೈ ಅವರ ವರ್ಣನೆ ಕಂಡುಬರುತ್ತದೆ. ಆಧುನಿಕ ಭಾರತದ ಬೌದ್ಧಿಕ ಪ್ರವಚನದಲ್ಲಿ ಆಸಕ್ತಿ ಹೊಂದಿರುವವರಂತೆ ಈ ಪಾತ್ರಗಳನ್ನು ಅಧ್ಯಯನ ಮಾಡುವಂತೆ ನಾನು ಅನೇಕ ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.