2014 ರಿಂದ 2022 ರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 90.9 ಲಕ್ಷ ಕೋಟಿ ಹಣವನ್ನು ಅಭಿವೃದ್ಧಿ ವೆಚ್ಚಗಳಿಗೆ ವಿನಿಯೋಗಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
2004ರಿಂದ 2014 ರವರೆಗಿನ ಅಭಿವೃದ್ಧಿ ವೆಚ್ಚಗಳಿಗೆ ಕೇವಲ 49.2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಂಕಿಅಂಶಗಳು ತೋರಿಸುತ್ತವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಂದಿನ ಯುಪಿಎ ಸರ್ಕಾರದ ಅಂಕಿ ಅಂಶಗಳನ್ನು ಮಾಹಿತಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಾಡಿದ ವೆಚ್ಚದಲ್ಲಿ ಆಹಾರ, ಇಂಧನ ಮತ್ತು ರಸಗೊಬ್ಬರ ಸಬ್ಸಿಡಿಗಾಗಿ ಇದುವರೆಗೆ 24.85 ಲಕ್ಷ ಕೋಟಿ ಮತ್ತು ಬಂಡವಾಳ ಸೃಷ್ಟಿಗೆ 26.3 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.
ಯುಪಿಎ ಆಡಳಿತದ 10 ವರ್ಷಗಳಲ್ಲಿ ಕೇವಲ 13.9 ಲಕ್ಷ ಕೋಟಿ ಮಾತ್ರ ಸಬ್ಸಿಡಿಗಾಗಿ ಖರ್ಚು ಮಾಡಲಾಗಿತ್ತು ಎಂದು ಅಂಕಿ ಅಂಶಗಳನ್ನು ಹೋಲಿಸಿ ಮಾಹಿತಿ ನೀಡಿದ್ದಾರೆ.