Monday, March 2, 2026
Monday, March 2, 2026

ದ್ವಿ ಚಕ್ರವಾಹನ ಚಾಲಕರೇ ,ಗಮನಿಸಿ

Date:

ದ್ವಿ ಚಕ್ರ ವಾಹನದ ಗ್ರಾಹಕರೇ, ಬೈಕ್‌ ಅಥವಾ ಸ್ಕೂಟರ್‌ ಏರಿ ಸಾಗುವಾಗುವವರು ಹೆಲ್ಮೆಟ್‌ ಧರಿಸದಿದ್ದರೆ ಮಾತ್ರ ಟ್ರಾಫಿಕ್‌ ಪೊಲೀಸರಿಂದ ದಂಡ ಹಾಕುತ್ತಾರೆಂದು ಭಾವಿಸಿದ್ದರೆ ಅದು ತಪ್ಪು.

ಹೆಲ್ಮೆಟ್‌ ಅನ್ನು ಸಡಿಲವಾಗಿ ಧರಿಸಿದರೆ ಅದಕ್ಕೆ ತಕ್ಷಣ ಪಾವತಿಸಬೇಕಾದ 2 ಸಾವಿರ ರೂ.ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹೆಲ್ಮೆಟ್‌ ಸರಿಯಾಗಿ ಧರಿಸದೇ ಇದ್ದರೆ ಯಾವುದೇ ಸುರಕ್ಷತೆ ಸಿಗುವುದಿಲ್ಲ. ಆದ್ದರಿಂದ,ಜನರು ಹೆಲ್ಮೆಟ್‌ ಧರಿಸುವುದನ್ನು ಕ‌ಡ್ಡಾಯಗೊಳಿಸುವುದಕ್ಕೋಸ್ಕರ ಕೇಂದ್ರ ಮೋಟಾರು ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ರೂಪಿಸಿದೆ.

ಹೆಲ್ಮೆಟ್‌ ಹಾಕಿದ್ದರೂ ಹೆಲ್ಮೆಟ್‌ನ ಬಕಲ್‌ ಹಾಕಿಕೊಳ್ಳದಿದ್ದರೆ 1 ಸಾವಿರ ರೂ. ತೆರಬೇಕಾಗುತ್ತದೆ. ಜೊತೆಗೆ ಧರಿಸಿರುವ ಹೆಲ್ಮೆಟ್‌ ಬಿಐಎಸ್‌ ಪ್ರಮಾಣೀಕೃತವಾಗಿರದಿದ್ದರೆ ಅದಕ್ಕೆ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಆದ್ದರಿಂದ, ಒಟ್ಟಾರೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ ಹೆಲ್ಮೆಟ್‌ ಸರಿಯಾಗಿ ಧರಿಸಿಯೂ ಸಿಗ್ನಲ್‌ ಜಂಪ್‌ ಮಾಡಿದರೆ ಅದಕ್ಕೆ 2 ಸಾವಿರ ರೂ. ದಂಡ ದಂಡ ಹಾಗೂ 3 ವರ್ಷಗಳವರೆಗೆ ಚಾಲನಾ ಪರವಾನಿಗೆ ಮುಟ್ಟುಗೋಲು ಹಾಕಿ ಕೊಳ್ಳುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಸಂಸ್ಕೃತಿ ಎಂಬುದು ಒಂದು ನಡವಳಿಕೆ : ಎಸ್ ಎನ್. ಚನ್ನಬಸಪ್ಪ

S. N. Channabasappa ಹಿಂದೂ ಮತ್ತು ಸಂಸ್ಕೃತಿ ಎಂಬುದು ಬೇರೆಯಲ್ಲ. ಸಂಸ್ಕೃತಿ...

Shivaganga Yoga Center ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ ಯೋಗಾಭ್ಯಾಸ ಅವಶ್ಯ: ಎಸ್.ರುದ್ರೇಗೌಡ

Shivaganga Yoga Center ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಪ್ರತಿ ದಿನ...

Yakshasamvardana Trust ಶಿವಮೊಗ್ಗದ ಯಕ್ಷ ಸಂವರ್ಧನಾ ಸಂಸ್ಥೆಯ ವಾರ್ಷಿಕೋತ್ಸವ ಯಕ್ಷಸಿಂಚನ ಯಶಸ್ವಿ

Yakshasamvardana Trust ಶಿವಮೊಗ್ಗದ ಯಕ್ಷಸಂವರ್ಧನಾ ಸಂಸ್ಥೆಯ ವಾರ್ಷಿಕೋತ್ಸವ ಯಕ್ಷಸಿಂಚನ-2026 ನಿನ್ನೆ ಮತ್ತು...