2006ರಲ್ಲಿ ಜೆಡಿಎಸ್ ದೆಸೆಯಿಂದ ಅಧಿಕಾರದ ರುಚಿ ಕಂಡ ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿ ಆಗಿಬಿಟ್ಟಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು,ಬಿಜೆಪಿಯ ನಯವಂಚಕ & ಅನೈತಿಕ ರಾಜಕಾರಣದ ಮುಖವನ್ನು ಬೆಂಗಳೂರು ನಗರದ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಎಂಬ ಮಹಾಶಯರೇ ಬಹಿರಂಗಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ಅಡ್ಡದಾರಿಯಲ್ಲೇ ಎನ್ನುವುದು ಈಗ ರುಜುವಾತಾಗಿದೆ. 1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಹಾಲಿ ಕಂದಾಯ ಸಚಿವ ಆರ್.ಅಶೋಕ್ ಸ್ಪರ್ಧಿಸಿದಾಗ ಯಲಹಂಕದಿಂದ ಬಂದಿದ್ದ 1,000 ಕಾರ್ಯಕರ್ತರು ತಲಾ 5ರಿಂದ 10 ಕಳ್ಳವೋಟು ಹಾಕಿ ಅವರನ್ನು ಗೆಲ್ಲಿಸಿದ್ದರು!!’ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಆಪರೇಷನ್ ಕಮಲ ಎಂಬ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಬಿಜೆಪಿ ಅಭದ್ರಗೊಳಿಸಿದೆ ಎಂದು ಟೀಕಿಸಿದ್ದಾರೆ.