ಎಲ್ಲಾದರು ಇರು ಎಂತಾದರೂ ಇರು ,ಎಂದೆಂದಿಗು ನೀ ಕನ್ನಡವಾಗಿರು…
ಎಂಬ ಕುವೆಂಪು ಅವರ ಪ್ರಸಿದ್ಧ ಕವಿತೆಗೆ ಸಜೀವ ಮಾದರಿಯಾದ ಘಟನೆ
ಮಾಧ್ಯಮಗಳಲ್ಲಿ ನೀವೀಗ ನೋಡಬಹುದು.
ತುಮಕೂರು ಜಿಲ್ಲೆ ಶಿರಾದ ದ್ವಾರಾಳು ಗ್ರಾಮದವರು.ಅಪ್ಪಟ ಕನ್ನಡ ಪ್ರತಿಭೆ ದೂರದ ಕೆನಡಾದಲ್ಲಿ ಕನ್ನಡದ ಕಂಪು ಬಿತ್ತರಿಸಿದೆ.
ಸದ್ಯ ಒಟಾವ ನಗರದ ತಂತ್ರಜ್ಞನ ಕಂಪನಿಯೊಂದಕ್ಕೆ ಹೂಡಿಕೆ ನಿರ್ವಹಣಾ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚಂದ್ರ ಆರ್ಯ ಅವರು ಕ್ರಿಯಾಶೀಲ ಮತ್ತು ಅನನ್ಯ ಚಿಂತನೆಗಳ ವ್ಯಕ್ತಿ.ದ್ವಿಪಕ್ಷೀಯವಾದ ಒಪ್ಪಂದಗಳಿಗೆ ಚಾಲನೆತುಂಬುವಲ್ಲಿ ಗಾಢಮನಸ್ಸುಳ್ಳವರು ಎಂದು ಮೆಚ್ಚಿಗೆ ನುಡಿಯಾಡಿದವರು ಕೆನಡಾದಲ್ಲಿನ ಭಾರತ ರಾಯಭಾರಿ ಶ್ರೀವಿಷ್ಣು ಪ್ರಕಾಶ್.
ನಮಗೆ ತಿಳಿದಂತೆ ಕನ್ನಡಿಗ ಜೆ ಎಚ್ ಪಟೇಲ್ ಅವರುಕನ್ನಡದ ಮಾತುಗಳನ್ನ ಮೊದಲಬಾರಿಗೆ ಭಾರತೀಯ ಸಂಸತ್ತಿನಲ್ಲಿ ರಿಂಗಣಗುಡುವಂತೆ ಮಾಡಿದವರು.
ಈಗ ಸಾಗರಾದಾಚೆಯ ಸರ್ಕಾರದ ಸಂಸತ್ತಿನಲ್ಲಿ ಕನ್ನಡ ಕಸ್ತೂರಿ ಘಮಘಮ ಹರಡುವಂತೆ ಮಾಡಿದವರು ಶ್ರೀ ಚಂದ್ರ ಆರ್ಯ.
ಕೇವಲ ಒಂದು ದಶಕದಲ್ಲ ಅವರ ಕೆನಡಾ ಸಾಧನೆ ಶ್ಲಾಘನೀಯ.

ಕೆನಡಾಗೆ ಬಂದಿಳಿದಾಗ, ಯಾರ ಹೆಸರಿಲ್ಲ!.ಯಾರ ಫೋನ್ ನಂಬರುಗಳೂ ಇಲ್ಲ. ಇವತ್ತು 1700 ಪ್ರತಿಷ್ಠಿತರ ಹೆಸರುಗಳು ನನ್ನ ಬ್ಲಾಕ್ಬೆರಿ( ಮೊಬೈಲ್) ಯಲ್ಲಿದೆ ಎನ್ನುತ್ತಾರೆ ಚಂದ್ರ.ಈ ಮಾತುಗಳು ಅವರ ಶ್ರಮದ ದುಡಿಮೆಯ ಸಂಕೇತವಾಗಿವೆ.
ಸದ್ಯ ಅವರು ಕೆನಡಾದ ನೇಪಿಯನ್ ಸಂಸತ್ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ.
ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಸಂಸದ್ ಸದಸ್ಯರ ತಂಡದ ಮುಖ್ಯಸ್ಥರಾಗಿರುವ ಅವರೀಗ ಕೆನಡಾದ ವಿದೇಶಾಂಗ ಮತ್ತು ವ್ಯಾಪಾರ ನೀತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಭಾರತದ ಸಚಿವರು ಮತ್ತು ಕಾನೂನು ನಿರ್ಮಾತೃಗಳು ಕೆನಡಾಗೆ ಭೇಟಿ ನೀಡಲು ಒತ್ತಾಯಿಸಿದ್ದಾರೆ.
ಕನ್ನಡದವರಾದ ಚಂದ್ರ ಆರ್ಯ ಅವರಿಗೆ ಕನ್ನಡಿಗರ ಅಭಿನಂದನೆಗಳು.