ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ತಹಶೀಲ್ದಾರ್, ಕರ್ನಾಟಕ ನೀರಾವರಿ ನಿಗಮ ಹಾಗೂ ಇತರೆ ಅಧಿಕಾರಿಗಳೊಂದಿಗೆ ಶಿವಮೊಗ್ಗ ನಗರದಲ್ಲಿ ಮಳೆಯಿಂದ ಹಾನಿಗೀಡಾದ ಕೆಲವು ಪ್ರದೇಶಗಳಿಗೆ ತೆರಳಿ, ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಗುರುಪುರ ಸಮೀಪದ ಶಾಂತಮ್ಮ ಲೇಔಟ್ ಮತ್ತು ಹೊಳೆಹೊನ್ನೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರಿಂಗ್‍ರಸ್ತೆ ಸಮೀಪದ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿರುವ ಕಾರಣ ಜಿಲ್ಲಾಧಿಕಾರಿಗಳು ನೀರಿನ ಒಳ ಹರಿವಿನ ಪರಿಶೀಲನೆಯನ್ನು ಕೈಗೊಂಡು, ಇಸ್ಲಾಪುರದ ಚಾನಲ್‍ನಲ್ಲಿನ ನೀರಿನ ಹರಿವು ಮತ್ತು ಹರಿಗೆ ಕೆರೆಯ ಕೋಡಿಗೆ ಸ್ವತಃ ಭೇಟಿ ನೀಡಿದ್ದಾರೆ. ಭೇಟಿ ನೀಡಿದ ಸಂದರ್ಭದಲ್ಲಿ ಚಾನಲ್‍ನಲ್ಲಿ ಕಸ ತುಂಬಿರುವುದನ್ನು ಪರಿಶೀಲಿಸಿ ಕಸವನ್ನು ತೆಗೆಸುವಂತೆ ಕೆಎನ್‍ಎನ್‍ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸ್ಥಳದಲ್ಲಿ ಜೆಸಿಬಿ ಮೂಲಕ ಕಸ ತೆಗೆಯುವ ಕೆಲಸವನ್ನು ಪರಿಶೀಲಿಸಿದ್ದಾರೆ. ಸ್ಥಳೀಯರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ನಾಗರಾಜ್, ಕೆಎನ್‍ಎನ್‍ಎಲ್ ಅಧಿಕಾರಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.