ಎಲ್ಲ ಪಡೆಗಳನ್ನು ಹಿಂಪಡೆಯುವವರೆಗೂ ಕದನ ವಿರಾಮ ಒಪ್ಪುವುದಿಲ್ಲ ಎಂದು ಉಕ್ರೇನ್, ರಷ್ಯಾಕ್ಕೆ ಖಡಕ್ಕಾಗಿ ಹೇಳಿದೆ.
ಪೂರ್ವ ಉಕ್ರೇನ್‌ಗೆ ಸಂಬಂಧಿಸಿ 2015ರಲ್ಲಿ ಬೆಲರೂಸ್‌ನ ರಾಜಧಾನಿ ಮಿನ್ಸ್ಕ್‌ನಲ್ಲಿ ಫ್ರಾನ್ಸ್ ಮತ್ತು ಜರ್ಮನಿಯ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಒಪ್ಪಂದ ಉಲ್ಲೇಖಿಸಿ ಅವರು, ‘ಉಕ್ರೇನ್ ಹೊಸ ‘ಮಿನ್ಸ್ಕ್’ ಒಪ್ಪಂದ ಮತ್ತು ಕೆಲವೇ ವರ್ಷಗಳಲ್ಲಿ ಹೊಸ ಯುದ್ಧ ನಡೆಸುವುದರಲ್ಲಿ ಆಸಕ್ತಿ ಹೊಂದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ಹೇಳಿದ್ದಾರೆ.
ನಮ್ಮ ಮುಂದೆ ಕದನ ವಿರಾಮದ ಪ್ರಸ್ತಾಪ ಇಡಬೇಡಿ. ರಷ್ಯಾ ಸಂಪೂರ್ಣ ಸೇನೆ ಹಿಂತೆಗೆದುಕೊಳ್ಳದೆ ಕದನ ವಿರಾಮ ಅಸಾಧ್ಯ’ ಎಂದು ರಷ್ಯಾ ಜತೆಗೆ ಹಲವು ಸುತ್ತಿನ ಶಾಂತಿ ಮಾತುಕತೆಗಳಲ್ಲಿ ಭಾಗಿಯಾಗಿ ತಿಳಿಸಿದ್ದಾರೆ.
ಆಕ್ರಮಿತ ಪ್ರದೇಶಗಳನ್ನು ಸಂಪೂರ್ಣ ಸ್ವತಂತ್ರಗೊಳಿಸಲು ರಷ್ಯಾ ಸಿದ್ಧವಾಗುವವರೆಗೆ, ಶಸ್ತ್ರಾಸ್ತ್ರಗಳು, ನಿರ್ಬಂಧಗಳು ಹಾಗೂ ಹಣಕಾಸು ನೆರವು ನಮ್ಮ ಒಟ್ಟು ತೀರ್ಮಾನ ಎಂದು ಅವರು ಹೇಳಿದ್ದಾರೆ.
ಮರಿಯುಪೊಲ್‌ನಲ್ಲಿ ಪ್ರತಿರೋಧ ತೋರುತ್ತಿದ್ದ ಉಕ್ರೇನಿನ 771 ಸೈನಿಕರು ಕಳೆದ 24 ತಾಸುಗಳಲ್ಲಿ ಶರಣಾಗಿದ್ದು, ಭದ್ರಕೋಟೆ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರ ತೊರೆದ ಉಕ್ರೇನ್ ಸೈನಿಕರ ಸಂಖ್ಯೆ 1,730ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
