Wednesday, March 25, 2026
Wednesday, March 25, 2026

ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಲಖನೌ ತಂಡ ಪ್ಲೇ ಆಫ್ ಪಟ್ಟಿಗೆ

Date:

ಲಖನೌ ಸೂಪರ್​ ಜೈಂಟ್ಸ್​ ತಂಡವು ಶ್ರೇಯಸ್​ ಅಯ್ಯರ್​ ನೇತೃತ್ವದ ಕೆಕೆಆರ್​ ವಿರುದ್ಧ ಕೇವಲ 2ರನ್​ಗಳ ಅಂತರದ ರೋಚಕ ಗೆಲುವು ದಾಖಲಿಸಿದೆ.
ಇದರೊಂದಿಗೆ ಜೈಂಟ್ಸ್​ ಪ್ಲೇ-ಆಫ್​ ಪ್ರವೇಶ ಪಡೆದುಕೊಂಡಿದೆ.

ಈ ಮೂಲಕ ಗುಜರಾತ್ ಬಳಿಕ ಎರಡನೇ ತಂಡವಾಗಿ ಮುಂದಿನ ಹಂತಕ್ಕೆ ಲಗ್ಗೆ ಹಾಕಿರುವ 2ನೇ ತಂಡವಾಗಿ ಹೊರಹೊಮ್ಮಿದೆ.

ಇನ್ನೊಂದೆಡೆ ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಸೋಲಿನೊಂದಿಗೆ​ ಅಭಿಯಾನ ಮುಗಿಸಿದೆ.
ವಿಕೆಟ್ ಕೀಪರ್ ಬ್ಯಾಟರ್ ಡಿಕಾಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ, ಐಪಿಎಲ್​​ನಲ್ಲಿ ಎರಡನೇ ಶತಕ( ಅಜೇಯ140) ಸಿಡಿಸಿ ಮಿಂಚಿದರು.
ಕ್ಯಾಪ್ಟನ್ ರಾಹುಲ್ 68​​ ರನ್​ಗಳಿಸಿದರು. ಡಿಕಾಕ್​ ತಾವು ಎದುರಿಸಿದ 70 ಎಸೆತಗಳಲ್ಲಿ 10 ಸಿಕ್ಸರ್, 10 ಬೌಂಡರಿ ಸೇರಿ ಅಜೇಯ 140 ರನ್​​ಗಳಿಕೆ ಮಾಡಿದರು. ಕೋಲ್ಕತ್ತಾ ತಂಡದ ಯಾವೊಬ್ಬ ಪ್ಲೇಯರ್ ಕೂಡ ಒಂದೇ ಒಂದು ವಿಕೆಟ್​ ಸಹ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

ಟಿಮ್ ಸೌಥಿ ತಾವು ಎಸೆದ 4 ಓವರ್​​ಗಳಲ್ಲಿ 57ರನ್​​ ನೀಡಿದರು.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಕ್ಯಾಪ್ಟನ್ ರಾಹುಲ್​ ಹಾಗೂ ಡಿಕಾಕ್​ ಉತ್ತಮ ಜೊತೆಯಾಟವಾಡಿದರು.

ವಿಕೆಟ್​ ಪತನಗೊಳ್ಳದಂತೆ ನಿಗಾ ವಹಿಸಿದ ಈ ಜೋಡಿ ಎದುರಾಳಿ ಬೌಲರ್​​ಗಳನ್ನ ದಂಡಿಸಿದರು.

ಕೊನೆ ಓವರ್​​ವರೆಗೆ ಬ್ಯಾಟ್ ಬೀಸಿದ ಈ ಜೋಡಿ 20 ಓವರ್​ಗಳಲ್ಲಿ 210ರನ್​​ಗಳಿಕೆ ಮಾಡಿದ್ದು, ಎದುರಾಳಿ ತಂಡದ ಮುಂದೆ ಬೃಹತ್ ಟಾರ್ಗೆಟ್​ ನೀಡಿತು.

211ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ಕೆಕೆಆರ್​, ಆರಂಭಿಕ ಆಘಾತದ ಹೊರತಾಗಿ ನಾಯಕ ಶ್ರೇಯಸ್​ ಅಯ್ಯರ್(50), ರಿಂಕು ಸಿಂಗ್ ಸ್ಫೋಟಕ(40) ಹಾಗೂ ನರೈನ್​ ಅಜೇಯ(21) ಸಹಾಯದಿಂದ ನಿಗದಿತ 20 ಓವರ್​ಗಳಲ್ಲಿ 8ವಿಕೆಟ್​ನಷ್ಟಕ್ಕೆ 208ರನ್​ಗಳಿಕೆ ಮಾಡಿ, 2ರನ್​ಗಳ ರೋಚಕ ಸೋಲು ಕಂಡಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿ ಒಡ್ಡುವ ಆಸೆ ಆಮಿಷಗಳಿಗೆ ಒಳಗಾಗಬೇಡಿ- ಸಿದ್ಧರಾಮಯ್ಯ

CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ...

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...