Monday, December 15, 2025
Monday, December 15, 2025

ಜಾತ್ರೆ ಸಮಸ್ಯೆ Watsapp ಮೂಲಕ ಇತ್ಯರ್ಥಪಡಿಸಿದ ನ್ಯಾಯಮೂರ್ತಿಗಳು

Date:

ಕಾಲ ಬದಲಾಗುತ್ತಿದೆ. ಎಲ್ಲರೂ ಕೂಡ ಕಾಲಮಾನಕ್ಕೆ ತಕ್ಕಂತೆ ತಂತ್ರಜ್ಞಾನದ ಬಳಕೆಯ ಕಡೆಗೆ ವಾಲುತ್ತಿದ್ದಾರೆ. ಪ್ರತಿಯೊಂದಕ್ಕೂ ತಂತ್ರಜ್ಞಾನದ ಮೊರೆ ಹೋಗುವ ಜನರು ಸಾವಿರಾರು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಈಗ ಸಾಮಾಜಿಕ ಜಾಲತಾಣಗಳು ಲಗ್ಗೆಯಿಟ್ಟಿವೆ.

ಪೊಲೀಸರು ಸಾಮಾಜಿಕ ಜಾಲತಾಣಗಳನ್ನು ಬಳಸಿ ಕ್ರಿಮಿನಲ್ ಕೇಸ್ ಗಳನ್ನ ಬಗೆಹರಿಸುವ ಘಟನೆಗಳು ಈಗಾಗಲೇ ನೀವೆಲ್ಲರೂ ಕೇಳಿರ್ತೀರಾ…

ಆದರೆ ಈಗ ಆ ಸಾಲಿಗೆ ನ್ಯಾಯಾಧೀಶರೊಬ್ಬರು ಸೇರಿಕೊಂಡಿದ್ದಾರೆ. ಹೌದು , ಕೋರ್ಟ್ ಗಳಲ್ಲಿ ಯಾವುದಾದರೂ ಒಂದು ಕೇಸ್ ನಡೆಯುತ್ತಿದ್ದರೆ , ಅದು ಸಂಪೂರ್ಣವಾಗಿ ಇತ್ಯರ್ಥಗೊಳ್ಳಲು ಹಲವಾರು ವರ್ಷಗಳೇ ಬೇಕಾಗುತ್ತದೆ.
ಹೀಗಿರುವಾಗ ನ್ಯಾಯಾಧೀಶರೊಬ್ಬರು ವಾಟ್ಸಪ್ ಬಳಸಿ ಸಮಸ್ಯೆಯನ್ನು ಬಗೆಹರಿಸಿದ ಅಪರೂಪದ ಘಟನೆ ನಡೆದಿದೆ.

ಈ ಮೂಲಕ ವಾಟ್ಸಪ್ ಮೂಲಕ ವಿಚಾರಣೆ ನಡೆಸಿ ತೀರ್ಪು ನೀಡಿದ ಹಿರಿಮೆಗೆ ಮದ್ರಾಸ್ ಹೈಕೋರ್ಟ್ ಪಾತ್ರವಾಗಿದೆ.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ನ್ಯಾಯಾಧೀಶರು ‘ವಾಟ್ಸಾಪ್’ ಮೂಲಕ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.

ಶ್ರೀ ಅಭೀಷ್ಟ ವರದರಾಜ ಸ್ವಾಮಿ ದೇವಸ್ಥಾನದ ‘ರಥ'(ಕಾರ್) ಉತ್ಸವವನ್ನು ಸೋಮವಾರ ನಡೆಸಬೇಕಿತಂತೆ ಆದರೆ, ಅಗ್ನಿ ಅವಘಡದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲವಂತೆ . ಉತ್ಸವ ನಡೆಸದಿದ್ದರೆ ತಮ್ಮ ಗ್ರಾಮವು ‘ದೇವರ ಕೋಪಕ್ಕೆ ಗುರಿಯಾಗಲಿದೆ’. ಕೂಡಲೇ ವಿಚಾರಣೆ ನಡೆಸಬೇಕೆಂದು ಆನುವಂಶಿಕ ಧರ್ಮದರ್ಶಿ ಪಿ.ಆರ್. ಶ್ರೀನಿವಾಸನ್ ಅರ್ಜಿ ಸಲ್ಲಿಸಿದ್ದರು.

ಈ ಕಾರಣಕ್ಕಾಗಿ ನ್ಯಾಯಮೂರ್ತಿ ಜಿ.ಆರ್.
ಸ್ವಾಮಿನಾಥನ್ ವಾಟ್ಸಾಪ್ ವಾಟ್ಸಪ್ ಮೂಲಕ ವಿಚಾರಣೆ ನಡೆಸಿದ್ದಾರೆ. ನಾಗರ್‌ ಕೋಯಿಲ್‌ ನಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ನ್ಯಾಯಾಧೀಶರು ವಿಭಿನ್ನ ರೀತಿಯಲ್ಲಿ ವಿಚಾರಣೆ ನಡೆಸಿದ್ದಾರೆ.

ಇದು ತ್ರಿಕೋನ ಅಧಿವೇಶನವಾಗಿತ್ತು. ನ್ಯಾಯಾಧೀಶರು ನಾಗರ್‌ ಕೋಯಿಲ್‌ ನಿಂದ ಪ್ರಕರಣವನ್ನು ಆಲಿಸಿದರು. ಅರ್ಜಿದಾರರ ವಕೀಲರು ಒಂದು ಸ್ಥಳದಲ್ಲಿ ಮತ್ತು ಅಡ್ವೊಕೇಟ್ ಜನರಲ್ ಆರ್. ಷಣ್ಮುಗಸುಂದರಂ ಮತ್ತೊಂದು ಸ್ಥಳದಲ್ಲಿದ್ದು ವಿಚಾರಣೆ ನಡೆದಿರುವುದು ವಿಶೇಷ.

ದೇವಸ್ಥಾನದ ಅನುವಂಶಿಕ ಟ್ರಸ್ಟಿಗೆ ರಥೋತ್ಸವ ನಿಲ್ಲಿಸುವಂತೆ ಆದೇಶ ಹೊರಡಿಸಲು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸಂಬಂಧಿಸಿದ ಇನ್ಸ್‌ ಪೆಕ್ಟರ್‌ ಗೆ ಅಧಿಕಾರವಿಲ್ಲ ಎಂದು ಪರಿಗಣಿಸಿದ ನ್ಯಾಯಾಧೀಶರು ಅದನ್ನು ರದ್ದುಗೊಳಿಸಿದರು.

ಉತ್ಸವಗಳನ್ನು ನಡೆಸುವಾಗ ಸರ್ಕಾರವು ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಸ್ಥಾನದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಪ್ರದೇಶದಲ್ಲಿ ಪ್ರಾರಂಭದಿಂದ ಕೆಲವು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಬೇಕು ಎಂದರು.

ಕಳೆದ ತಿಂಗಳು ತಂಜಾವೂರು ಬಳಿ ದೇವಸ್ಥಾನದ ರಥವೊಂದು ಮೆರವಣಿಗೆ ವೇಳೆ ಹೈ ಟೆನ್ಶನ್ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ಪರ್ಶದಿಂದ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ 17 ಮಂದಿ ಗಾಯಗೊಂಡಿದ್ದರು.

ಕಾರಣ ಏನೇ ಇರಲಿ, ನ್ಯಾಯಮೂರ್ತಿಗಳಾಗಿ ನಡೆ ದೇಶದ ಜನರ ಹುಬ್ಬೇರಿಸುವಂತೆ ಮಾಡಿದೆ. ತಂತ್ರಜ್ಞಾನದಿಂದ ಏನೆಲ್ಲಾ ಸಾಧ್ಯ ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...