ಶ್ರೀಲಂಕಾದಲ್ಲಿ ನಡೆದ ಘರ್ಷಣೆಯಲ್ಲಿ ಆಡಳಿತ ಪಕ್ಷದ ಸಂಸದನ ಹತ್ಯೆ ಮಾಡಲಾಗಿದೆ. ಪ್ರಧಾನಿ ಮಹಿಂದಾ ರಾಜಪಕ್ಷ ರಾಜೀನಾಮೆಯ ಬಳಿಕ ಈ ಘರ್ಷಣೆ ನಡೆದಿದೆ. ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಆತುಕೋರಾಲ ಅವರನ್ನು ಥಳಿಸಿ ಹತ್ಯೆ ಮಾಡಲಾಗಿದೆ.
ಮಹಿಂದಾ ರಾಜಪಕ್ಸೆ ರಾಜೀನಾಮೆಯಿಂದ ಕೆರಳಿದ ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತುಕೋರಾಲ ಅವರು ರಾಜಧಾನಿ ಕೊಲಂಬೊ ಬಳಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ 3 ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಸದರ ಈ ನಡೆಯಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ನಿಟ್ಟಂಪುರದಲ್ಲಿ ಅಮರಕೀರ್ತಿ ಅವರ ಕಾರ್ ತಡೆದು ನಿಲ್ಲಿಸಿದೆ. ಅವರ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶ್ರೀಲಂಕಾದಲ್ಲಿ ಆಡಳಿತ ಪಕ್ಷದ ಸಂಸದರೊಬ್ಬರನ್ನು ನಾಗರಿಕರು ಥಳಿಸಿ ಕೊಂದಿರುವ ಘಟನೆ ವಿಶ್ವ ವೇದಿಕೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.