ಕಳೆದೆರಡು ತಿಂಗಳಿನಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ, ಶುಕ್ರವಾರದಂದು ಉಕ್ರೇನ್ ರಾಜಧಾನಿಯ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರು ಕೀವ್‌ಗೆ ಭೇಟಿ ನೀಡಿದ್ದು, ಇದೇ ಸಂದರ್ಭದಲ್ಲಿ ಆ ನಗರದ ಮೇಲೆ ರಷ್ಯಾ ದಾಳಿ ನಡೆಸುವ ಮೂಲಕ ತನ್ನ ಉದ್ಧಟತನ ಪ್ರದರ್ಶಿಸಿದೆ ಎಂದು ತಿಳಿದುಬಂದಿದೆ.
ರಷ್ಯಾದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಹಾಗೂ ಗುಟೆರಸ್ ಅವರ ನಡುವಿನ ಸಭೆ ಮುಕ್ತಾಯವಾದ ಕೆಲವೇ ನಿಮಿಷಗಳಲ್ಲಿ ಕೀವ್ ನಗರದ ಮೇಲೆ ದಾಳಿ ನಡೆಸಲಾಗಿದೆ. ಸಭೆ ನಡೆದ ಪ್ರಾಂತದಲ್ಲಿ ಯಾವುದೇ ದಾಳಿ ಆಗಿಲ್ಲ. ಹೀಗಾಗಿ ಗುಟೆರಸ್ ಹಾಗೂ ಅವರೊಂದಿಗಿದ್ದ ವಿಶ್ವಸಂಸ್ಥೆಯ ಕೆಲವು ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ.
ಹಲವು ದಶಕಗಳ ಹಿಂದೆಯೇ ನಿರ್ಮಾಣಗೊಂಡಿರುವ ರಷ್ಯಾ- ಭಾರತ ಬಾಂಧವ್ಯದಿಂದ ಎರಡೂ ದೇಶಗಳ ಅನಿವಾರ್ಯತೆಗಳು ಪರಸ್ಪರ ಪೂರ್ಣಗೊಂಡಿವೆ.
ಇಂಥದ್ದೇ ಒಂದು ಶಾಶ್ವತ ಸಂಬಂಧವನ್ನು ಭಾರತ ದೊಂದಿಗೆ ಸ್ಥಾಪಿಸಲು ಅಮೆರಿಕ ಪ್ರಯ ತ್ನಿಸುತ್ತಿದೆ. ಆ ನಿಟ್ಟಿನಲ್ಲಿ, ಚರ್ಚೆಗಳು ಮುಂದುವರಿದಿವೆ” ಎಂದು ಅವರು ಹೇಳಿದ್ದಾರೆ.
ಭಾರತವು ತನ್ನ ಆವಶ್ಯಕತೆಗನುಗುಣವಾಗಿ ರಷ್ಯಾದೊಂದಿಗೆ ಅತ್ಯುತ್ತಮ ವಾಣಿಜ್ಯ ಸಂಬಂಧವನ್ನು ದಶಕಗಳ ಹಿಂದಿನಿಂದಲೂ ಕಾಪಾಡಿಕೊಂಡು ಬಂದಿದೆ.
ಅಂಥದ್ದೊಂದು ಗಟ್ಟಿಯಾದ ವಾಣಿಜ್ಯ ನಂಟನ್ನು ಈ ಹಿಂದೆ ಸ್ಥಾಪಿಸಲು ಅಮೆರಿಕದಿಂದ ಸಾಧ್ಯವಾಗಿಲ್ಲ ಎಂದು ಅಮೆರಿಕದ ಗೃಹ ಸಚಿವ ಅಂತೋನಿ ಬ್ಲಿಂಕನ್ ಹೇಳಿದ್ದಾರೆ.