Saturday, March 28, 2026
Saturday, March 28, 2026

ಒಂದು ಸಿಗರೇಟಿನಲ್ಲಿ 7 ಸಾವಿರ ರಾಸಾಯನಿಕ ವಸ್ತುಗಳಿವೆ

Date:

ತಂಬಾಕು ವ್ಯಸನದ ದುಷ್ಪರಿಣಾಮಗಳಿಂದಾಗಿ ಪ್ರಪಂಚದಾದ್ಯಂತ ಪ್ರತೀ 06 ಸೆಕೆಂಡ್‌ಗೆ ಒಬ್ಬರು ಸಾವನ್ನಪ್ಪುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರ ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಶಿವಮೊಗ್ಗ ಜಿಲ್ಲಾ ಸಲಹೆಗಾರರಾದ ಹೇಮಂತ್‌ರಾಜ್ ಅರಸ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯವು ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಂಬಾಕು ಮುಕ್ತ ವಿಶ್ವವಿದ್ಯಾಲಯ ಘೋಷಣಾ ಪೂರ್ವಕಾರ್ಯಕ್ರಮ ಮತ್ತು ಅರಿವುಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿಯೂ ತಂಬಾಕು ವ್ಯಸನದ ದುಷ್ಟರಿಣಾಮಗಳು ತೀವ್ರವಾಗಿವೆ. ದೇಶದ ಶೇ. 35ರಷ್ಟು ಜನಸಂಖ್ಯೆ ತಂಬಾಕು ಬಳಕೆ ಮಾಡುತ್ತಿದೆ. ಪ್ರತಿವರ್ಷ 10 ಲಕ್ಷಜನರು ತಂಬಾಕಿನಿಂದಾಗಿ ಬರುವ ಕ್ಯಾನ್ಸರ್, ಪಾರ್ಶ್ವವಾಯು, ಕ್ಷಯರೋಗ, ನ್ಯುಮೋನಿಯಾ, ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ ಎಂದರು.

ಸಿಗರೇಟನ್ನು 7 ಸಾವಿರ ರೀತಿಯ ವಿಷಯುಕ್ತ ರಾಸಾಯಿನಿಕ ವಸ್ತುಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ. ನೇರವಾಗಿ ಸೇವನೆ ಮಾಡುವವರಿಗಲ್ಲದೇ, ಪಕ್ಕದಲ್ಲಿಇದ್ದಾಗ ಆಗುವ ಪರೋಕ್ಷ ಸೇವನೆಯು ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತದೆ. ಸ್ನೇಹಿತರು, ಸೆಲೆಬ್ರಿಟಿಗಳ ತಂಬಾಕು ಸೇವನೆ ಯುವಕರ ಮೇಲೆ ಅಗಾಧ ಪ್ರಭಾವ ಬೀರುತ್ತಿದೆ. ಯೋಗ, ಧ್ಯಾನ, ಉತ್ತಮ ಸ್ನೇಹ ವಲಯಗಳು, ಪೋಷಕರ ಕಾಳಜಿಯಿಂದ ತಂಬಾಕಿನಿಂದ ದೂರ ಉಳಿಯುವುದು ಸಾಧ್ಯವಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಹಿಂದೆ ಶ್ರೀಮಂತರು ತಮ್ಮ ವೈಭವಗಳನ್ನು ಪ್ರದರ್ಶಿಸಲು ತಂಬಾಕು ಬಳಕೆ ಹುಟ್ಟುಹಾಕಿದರು. ಇಂದು ಅದುವೇ ವ್ಯಸನವಾಗಿ ಪರಿವರ್ತನೆ ಹೊಂದಿ ಯುವಜನರ ಬದುಕನ್ನು ನಾಶಪಡಿಸುತ್ತಿದೆ. ದೇಶದ ಬೆಳವಣಗೆಗೆ ಅಡ್ಡಿಯಾಗುವ ಹಂತಕ್ಕೆ ಬೆಳೆದಿದೆ. ಈ ಕುರಿತುದೊಡ್ಡ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ವಿವಿ ಯು ಕೈಗೊಂಡಿದೆ. ಮತ್ತಷ್ಟು ಚುರುಕುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್‌ಕುಮಾರ್, ಆರೋಗ್ಯಾಧಿಕಾರಿಗಳು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಆಕಸ್ಮಿಕ ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ಸಾವು

Breaking News ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮಿಪದ...

CM Siddharamaih ಸರ್ಕಾರ ಸಾಲವನ್ನು ನಿಯಮದ ಮಿತಿಯೊಳಗೆ ಮಾಡಿದೆ- ಮುಖ್ಯಮಂತ್ರಿ ಸಿದ್ಧರಾಮಯ್ಯ.

CM Siddharamaih ಯಾವುದೇ ರಾಜ್ಯ ಅಥವಾ ದೇಶವಾಗಲಿ ಸಾಲ ಮಾಡದಿರಲು ಸಾಧ್ಯವಿಲ್ಲ, ಜನ...

Shri Mahavir Jayanti ಮಾರ್ಚ್ 30. ಶ್ರೀಮಹಾವೀರ ಜಯಂತಿ ಆಚರಣೆಗೆ ಜಿಲ್ಲಾಡಳಿತ ಸಜ್ಜು.

Shri Mahavir Jayanti ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ...

Davangere By Election ಸಾದಿಕ್ ಪೈಲ್ವಾನ್ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ.

Davangere By Election ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ...