ಎರಡೂ ಕಣ್ಣು ಕಾಣದೆ ಅಂಧರಾಗಿರುವ ಶ್ರೀ ಮಹೇಶ ಮತ್ತು ಶ್ರೀ ಸುರೇಶ ಬಡಿಗೇರ ಇವರು ಅತ್ಯುನ್ನತ ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀ ಮಲ್ಲಪ್ಪ ಮಳೆಯಪ್ಪ ಬಡಿಗೇರರವರ ಸುಪುತ್ರರು.
ತಂದೆಯ ಗರಡಿಯಲ್ಲಿ ಶ್ರೀಶೈಲ, ಯಡಿಯೂರು, ಬೆಲೂರು ಹೀಗೆ 35 ಕ್ಕೂ ಹೆಚ್ಚು ಸುಪ್ರಸಿದ್ಧ ಕ್ಷೇತ್ರಗಳಲ್ಲಿ ರಥ ತಯಾರಿಸುವಲ್ಲಿ ಅನುಭವ ಪಡೆದ ಈ ಇಬ್ಬರು ಪ್ರಥಮವಾಗಿ ಕುಷ್ಟಗಿ ತಾಲ್ಲೂಕಿನ ಪಟ್ಟಲಚಿಂತಿಯಲ್ಲಿ ಸ್ವತಃ ಇವರೇ ತಯಾರಿಸಿದ ರಥವು ಇದೇ ತಿಂಗಳು 16ರಂದು ಲೋಕಾರ್ಪಣೆಯಾಗುತ್ತಿದೆ.
ಸಂಪೂರ್ಣವಾಗಿ ಎರಡೂ ಕಣ್ಣು ಕಾಣದಿರುವ ಇವರು ಯಾವುದೇ ತಂತ್ರೋಪಕರಣಗಳಿಲ್ಲದೆ ಬೆರಳುಗಳ ಸ್ಪರ್ಶದಿಂದಲೇ ಅದ್ಭುತ ಮೂರ್ತಿಗಳನ್ನು ನಿರ್ಮಿಸಿದ್ದಾರೆ.

ಇಂದು ಅವರು ಮಾಡಿರುವ ರಥವನ್ನು ಪ್ರತ್ಯಕ್ಷ ಕಂಡು ಒಂದು ಕ್ಷಣ ದಿಗ್ಭ್ರಮೆಗೊಂಡೆ. ಆರೋಗ್ಯವಂತರಾಗಿರುವ ಕೆಲ ಯುವಜನರು ಕೆಲಸವಿಲ್ಲವೆಂದು ಸೋಂಭೇರಿಗಳಾಗಿ ತಿರುಗುವ ಜನರ ಮಧ್ಯೆ ಇಂತಹ ಅಪರೂಪದ ಮಾಣಿಕ್ಯ ಇರುವುದು ಬಹಳ ವಿರಳ. ಕಣ್ಣು ಕಾಣದ ಇವರು ತಂದೆ ಕಲಿಸಿಕೊಟ್ಟ ವಿದ್ಯೆಯನ್ನು ಛಲ ಬಿಡದೆ ಸದುಪಯೋಗ ಮಾಡಿಕೊಂಡು ದೊಡ್ಡ ಸಂಸಾರದ ಬಂಡಿಯನ್ನು ಸಾಗಿಸುತ್ತಿರುವ ಇವರಿಗೆ ಎಷ್ಟು ಸೆಲ್ಯೂಟ್ ಹೊಡೆದರೂ ಕಡಿಮೆಯೆ.
ಇವರೇ ನಿಜವಾದ ವಿಶ್ವಕರ್ಮರು. ದಯಮಾಡಿ ಇವರ ಕೌಶಲಕ್ಕೆ ನೀವು ಗೌರವ ಕೊಡುವುದಾರೆ ನಿಮ್ಮ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ರಥ ಮಾಡಿಸುವುದಿದ್ದರೆ ಇವರಿಗೆ ಅವಕಾಶ ಕೊಡಿಸಿ.
ಸುರೇಶ ಬಡಿಗೇರ ಮೊ.ನಂ (81479 01809)
ಮಹೇಶ ಬಡಿಗೇರ (96113 74828
ಕೃಪೆ :
ರಮೇಶ ಎಚ್. ಬಡಿಗೇರ