Saturday, December 6, 2025
Saturday, December 6, 2025

ವಿಶ್ವ ಪುಸ್ತಕದ ದಿನ

Date:

ಈಗ ನಿಮಗೆ ತಿಳಿದೇ ಇದೆ ಎಲ್ಲವಕ್ಕೂ ಒಂದು ದಿನಾಚರಣೆ ಇದೆ. ಪುಸ್ತಕಗಳಿಗೂ ಏಪ್ರಿಲ್ 23 ರಂದು ದಿನವನ್ನ ಆಚರಿಸಲಾಗುತ್ತದೆ. ಪುಸ್ತಕಗಳು ನಿಜಕ್ಕೂ ನಮ್ಮ‌ ಗೆಳೆಯ, ದಾರ್ಶನಿಕ ಮತ್ತು ಮಾರ್ಗದರ್ಶಿ.

ಮೊಟ್ಡಮೊದಲ ಬಾರಿಗೆ ಅಂದರೆ‌ ಏಪ್ರಿಲ್ 23 ,1995 ರಿಂದ ಯುನೆಸ್ಕೋ‌ ಈ ಪುಸ್ತಕಗಳ‌ ಸಮಗ್ರ ಭವಿಷ್ಯದ ಬಗ್ಗೆ ಚಿಂತಿಸಿ ದಿನವನ್ನ ಆಚರಿಸಲು ತೀರ್ಮಾನಿಸಿತು.
ಇಲ್ಲಿ ಪುಸ್ತಕಗಳ ಭವಿಷ್ಯ ಅಂದರೆ ಬರಹಗಾರರ ಹಕ್ಕು ಅರ್ಥಾತ್ ಹಕ್ಕು ಸ್ವಾಮ್ಯಗಳ ಬಗ್ಗೆ ಎಲ್ಲರನ್ನೂ ಜಾಗೃತಗೊಳಿಸುವ ದಿನವೂ ಆಗಿದೆ.
ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ ಜಗತ್ತಿನ ಮಹಾ ನಾಟಕಕಾರ ವಿಲಿಯಂ ಷೇಕ್ಸ್ಪಿಯರ್
ಮರಣ ಹೊಂದಿದ ದಿನವೂ ಆಗಿದೆ.

ಪುಸ್ತಕಗಳು ಗೆಳೆಯ ಎನ್ನುವ ಸಂಗತಿ ನಮಗೀಗ ಅನುಭವ ವೇದ್ಯ. ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ಕಾಡಿದ ಕೋವಿಡ್
ಒಂದು ಪಾಠ ಹೇಳಿತು. ಆಗ ಮನೆಯಿಂದ ಹೊರಹೋಗುವಂತಿಲ್ಲ
ಅರ್ಥಾತ್ ಹೋಂ ಕ್ವಾರಂಟೈನ್. ಆಗ ನಮಗೆ ಆಪ್ತವಾಗಿ ಸಿಕ್ಕಿದ್ದು ಓದಲು ಪುಸ್ತಕಗಳು. ಅಂತಾರಾಷ್ಟ್ರಿಯ ಲೆಕ್ಕಾಚಾರದ ಪ್ರಕಾರ ಕೋವಿಡ್ ಅವಧಿಯಲ್ಲಿ ಓದುಗರ ಸಂಖ್ಯೆ ಹಿಂದಿನದಕ್ಕಿಂತ ಇಮ್ಮಡಿಯಾಯಿತಂತೆ.

ಒಳ್ಳೊಳ್ಳೆಯ ಪುಸ್ತಕಗಳಿಗೆ ಸಕತ್ ಮಾರುಕಟ್ಟೆ ಸಿಕ್ಕಿತು.
ಪುಸ್ತಕಗಳ ಪೀಳಿಗೆಗೆ ನಾವು ನೀಡುವ ಶಾಶ್ವತ ಉಡುಗೊರೆ ಎಂದೂ ಹೇಳಬಹುದು.ಏಕೆಂದರೆ
ಮನುಷ್ಯನ ವಿಚಾರವಂತಿಕೆ ಜೀವನದ ಅನುಭವಗಳು, ಹಿರಿಯರ
ಸಾಮಾಜಿಕ ವ್ಯವಸ್ಥೆ ರೀತಿ ನೀತಿಗಳು ನಮಗೆ ಓದುವುದರಿಂದ ಲಭ್ಯ.
ಒಂದು ರೀತಿಯ ಅಮೌಖಿಕ ಪರಂಪರೆಯನ್ನ ನಮ್ಮ ಬೆನ್ನಿಗೆ ಇರಿಸಿಕೊಂಡಂತಹ ಅನುಭವವಾಗುತ್ತದೆ.
ಒಳ್ಳೆಯ ಪುಸ್ತಕಗಳು‌ ಒಳ್ಳೆಯ ಮಿತ್ರರು.ವಿಶ್ವ ಪುಸ್ತಕ ದಿನ ನಮ್ಮೆಲ್ಲರ
ಒಡನಾಡಿಯಾಗಿ‌ ಚಂದದ ಪುಸ್ತಕಗಳು ಇರಲಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...