ಗಜಗರ್ಭ ಅಂದ್ರೆ ಬಹಳ ತಡವಾಗಿ ಪ್ರಸವಕ್ರಿಯೆ ಆಗುವುದಕ್ಕೆ ನಮ್ಮಲ್ಲಿ ಈ ಆಡುಮಾತಿದೆ. ಪ್ರಾಣಿತಜ್ಞರ ಪ್ರಕಾರ ಆನೆಗಳು ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಪ್ರಸವಿಸುತ್ತವೆ.ವೈದ್ಯರ ಪ್ರಕಾರ ಬಸಿರಿನ ಅವಧಿ ಹದಿನೆಂಟರಿಂದ ಇಪ್ಪತ್ತೆರಡು ತಿಂಗಳು. ಆದರೆ ಮನುಷ್ಯರಲ್ಲಿ ನವಮಾಸಗಳು ಫಿಕ್ಸ್. ಮನುಷ್ಯರಿಗಿಂತ ಎರಡು ಪಟ್ಟು ಅವಧಿ. ಈಗ ಪ್ರಾಣಿಪ್ರಿಯರಿಗೊಂದು ಅಚ್ಚರಿಯ ಸುದ್ದಿ. ಆನೆಯಮ್ಮನಿಗೆ ಮಗು ಜನನ. ಅದೂ ಅವಳಿಜವಳಿ!. ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಎರಡು ಮರಿಗಳು ಕಣ್ಬಿಟ್ಟಿವೆ.
ತಮ್ಮ ಕಾಲ ಮೇಲೆ ತಾವೇ ನಿಂತು ಕೊಂಡಿವೆ. ಬಾಣಂತಿ ಆನೆಯಮ್ಮನ ಬಳಿ ಯಾರೂ ಸುಳಿಯುವ ಹಾಗಿಲ್ಲ.ಮನುಷ್ಯರಾದರೆ ಮಗು ಗಂಡೋ?ಹೆಣ್ಣೋ? ಗೊತ್ತಾಗಿಬಿಡುತ್ತದೆ.ಆದರೆ ವನ್ಯ ಪರಿಸರದ ಆನೆಗಳ ಬಳಿಗೆ ಹೋಗಿ ಲಿಂಗ ನಿರ್ಧರಿಸಲು ಎಂಟೆದೆ ಧೈರ್ಯ ಬೇಕು. ಅವುಗಳ ಚಲನವಲನ ದೂರದಿಂದ ವೀಕ್ಷಿಸಬೇಕಷ್ಟೆ.ಮುದ್ದಿನ ಮರಿಗಳ ಜೊತೆಗಿರುವ ತಾಯಿಗೆ ಮೈಯೆಲ್ಕಾ ಕಣ್ಣಾಗಿರುತ್ತದೆ. ಮನುಷ್ಯ ಪ್ರಾಣಿ ವಾಸನೆ ಬಂದರೆ ಬಿಡುವುದಿಲ್ಲ.!
ಪಶುವೈದ್ಯರು ಹೇಳುವ ಪ್ರಕಾರ ಅವಳಿಜವಳಿ ಪ್ರಸವ ಬಹಳ ಅಪರೂಪ. ಅಲ್ಲಿನ ಗ್ರಾಮವಾಸಿಗಳು ನೋಡಿದಂತೆ ಸುಮಾರು 40 ವರ್ಷದ ಹಿಂದೆ ಹೀಗೆ, ಈ ಅವಳಿಜವಳಿ ಜನನ ಆಗಿತ್ತಂತೆ. ಬಂಡಿಪುರ ಅರಣ್ಯದ ಫಾಸಲೆಯ ಪಶುವೈದ್ಯ ಡಾ.ನಾಗರಾಜ್ ಅವರು ತಮ್ಮ ಎರಡೂವರೆ ದಶಕದ ವೃತ್ತಿಸೇವೆಯಲ್ಲಿ ಇದೇ ಪ್ರಥಮ ಟ್ವಿನ್ಸ್ ಮರಿಗಳನ್ನ ನೋಡಿರುವುದು ಎನ್ನುತ್ತಾರೆ.ಪ್ರಸವದ ನಂತರ
ಮರಿಗಳೊಡನೆ ತಾಯಿ ಆನೆ ತನ್ನ ಗುಂಪನ್ನ ಸೇರಿಕೊಳ್ಳುವುದು ರೂಢಿಯಂತೆ. ತಾಯಿಯ ಹೃದಯವೇ ಹಾಗೆ.ಜನಿಸಿದ ಮಗುವಿನ ರಕ್ಷಣೆ. ಸದ್ಯ ಈ ಆನೆ ಮರಿಯೊಡನೆ ಆನೆಗಳ ಹಿಂಡು ಸೇರಿಕೊಂಡಿತು. ಮಗು ಮತ್ತು ಬಾಣಂತಿ ಹುಷಾರಾಗಿದ್ದಾರ? ಸಾಮಾನ್ಯ ನಮ್ಮಲ್ಲಿ ಯಾರಾದರೂ ಕೇಳುವ ಪ್ರಶ್ನೆ.
ಹೌದು ..( ಪತ್ರಿಕಾ ವರದಿ ಪ್ರಕಾರ) ತಾಯಿ ಮಕ್ಕಳು ಆರಾಮಾಗಿದ್ದಾರೆ.
ಬಂಡಿಪುರ ಅರಣ್ಯಕ್ಕೆ ಪ್ರವಾಸ ಬಂದವರ ಮೊಬೈಲು,ಕ್ಯಾಮರಾಗಳಿಗೆ ಈ ಅಪರೂಪದ ತಾಯಿ ,ಅವಳಿಜವಳಿ ಮಕ್ಕಳು ಶಾನೆ ಸೆರೆಯಾಗಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ,ವಿಡಿಯೋಗಳು ಟ್ರೋಲ್ ಆಗಿವೆ…!