Wednesday, October 2, 2024
Wednesday, October 2, 2024

ಭೂಮಿ ಪ್ರೇಮಿಗಳಾಗೋಣ

Date:

ಭೂಮಿ ದಿನ ಏಪ್ರಿಲ್ 22 ರಂದು ವಿಶ್ವಾದ್ಯಂತ ಆಚರಿಸಲಾಗುವ ವಾರ್ಷಿಕ ಭೂ ದಿನಾಚರಣೆಯಾಗಿದೆ.

ಪರಿಸರ ರಕ್ಷಣೆ ಬೆಂಬಲವನ್ನು ವಿವಿಧ ಪ್ರದರ್ಶನಗಳ ಮೂಲಕ ನಡೆಸಲಾಗುತ್ತದೆ. 1970 ರಲ್ಲಿ ಮೊದಲ ಭೂಮಿ ದಿನ ಆಚರಿಸಲಾಯಿತು.

193 ರಾಷ್ಟ್ರಗಳಲ್ಲಿ ಈ ದಿನ ಆಚರಿಸಲಾಗುತ್ತದೆ. ಇದನ್ನು ಭೂಮಿ ದಿನ ನೆಟ್ವರ್ಕ್ ಜಾಗತಿಕವಾಗಿ ಸಂಬಂಧ ಹೊಂದಿವೆ. 1990ರ ಹೊತ್ತಿನಲ್ಲಿ ಒಂದು ಪರಿಸರ ಆಂದೋಲನವಾಗಿ ರೂಪುಗೊಂಡ ಭೂ ದಿನಾಚರಣೆಯನ್ನು ಇಂದು ಬಹುತೇಕ ರಾಷ್ಟ್ರಗಳಲ್ಲಿ ಪರಿಸರ ಪರ ಚಿಂತನೆಯನ್ನು ಬಿತ್ತುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ.

ಈ ವಿಶೇಷ ದಿನದಂದು, ಮಿತಿಮೀರಿದ ಜನಸಂಖ್ಯೆ, ಜೀವವೈವಿಧ್ಯತೆಯ ನಷ್ಟ, ಓಝೋನ್ ಪದರದ ಸವಕಳಿ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಸೇರಿದಂತೆ ಹಲವು ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು, ಜವಾಬ್ದಾರಿಯಿಂದ ವರ್ತಿಸಲು ಈ ದಿನವನ್ನು ಮೀಸಲಿಡಲಾಗಿದೆ.

ಪ್ರತಿ ವರ್ಷವೂ ಭೂ ದಿನಾಚರಣೆಯನ್ನು ಒಂದೊಂದು ಉದ್ದೇಶವನ್ನಿಟ್ಟುಕೊಂಡು ಆಚರಿಸಲಾಗುತ್ತದೆ. ಅಂದಿನಿಂದ ಮುಂದಿನ ಭೂ ದಿನಾಚರಣೆಯ ತನಕ ಅದರ ಉದ್ದೇಶವನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸಲಾಗುತ್ತದೆ. ಅಂತೆಯೇ ಈ ಬಾರಿಯ ವಿಶ್ವ ಭೂ ದಿನಾಚರಣೆಯನ್ನು ‘ಭೂಮಿಯನ್ನು ಪುನರ್​ ನಿರ್ಮಿಸೋಣ’ ಎಂಬ ಸದುದ್ದೇಶದೊಂದಿಗೆ ಆಚರಿಸಲಾಗುತ್ತಿದೆ.

ವಿಶ್ವ ಭೂ ದಿನಾಚರಣೆ ಎನ್ನುವುದು ಯಾವುದೋ ಒಂದು ಸಂಸ್ಥೆಗೆ ಮೀಸಲಾದ ದಿನಾಚರಣೆಯಲ್ಲ. ಈ ಭೂಮಿಯನ್ನು ಹಾಳುಗೆಡವಲು ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣವಾಗಿರುವ ಪ್ರತಿ ಮನುಷ್ಯನೂ ಇದರ ಮಹತ್ವವನ್ನು ಅರಿತು ತನ್ನನ್ನು ತಾನು ತಿದ್ದಿಕೊಂಡು ಮುನ್ನಡೆಯಲು ಈ ದಿನಾಚರಣೆ ಒಂದು ಮಾರ್ಗ.

ನಮ್ಮ ಸುತ್ತಮುತ್ತಲೂ ಭೂಮಿಗೆ ಮಾರಕವಾಗುವಂತಹ ಅದೆಷ್ಟೋ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಅದನ್ನು ನಿಲ್ಲಿಸಲು ಪ್ರಯತ್ನಿಸಿ, ಅದರಲ್ಲಿ ತೊಡಗಿಸಿಕೊಂಡವರಲ್ಲಿ ತಿಳುವಳಿಕೆ ಮೂಡಿಸಿದರೆ ಅದು ಕೂಡಾ ನಾವು ಮಾಡಬಹುದಾದ ಅತ್ಯುತ್ತಮ ಕಾರ್ಯ.

ಅಲ್ಲದೇ ಪ್ರಸ್ತುತ ಸಂದರ್ಭದಲ್ಲಿ ಭೂಮಂಡಲಕ್ಕೆ ಮಾರಕವಾಗಿರುವ ಅಂಶಗಳತ್ತ ಗಮನಹರಿಸಿ ಅದನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನೂ ಕೈಗೊಂಡು ವರ್ಷಪೂರ್ತಿ ವಿಶ್ವ ಭೂ ದಿನಾಚರಣೆಯ ಉದ್ದೇಶವನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕಬಹುದು. ಭೂಮಿಯು ತನ್ನಲ್ಲೇ ತಾನು ಒಂದು ಅದ್ಭುತ, ವಿಸ್ಮಯ… ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಲವಾರು ಜೀವಸಂಕುಲಗಳನ್ನು ತನ್ನೊಳಗೆ ಇಟ್ಟುಕೊಂಡು ಕಾಪಾಡುತ್ತಿದೆ.
ಭೂಮಿಯನ್ನು ಕಾಪಾಡುವ ಹಾಗೂ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...