Sunday, December 7, 2025
Sunday, December 7, 2025

ಕೊಲ್ಲೂರು ಮೂಕಾಂಬಿಕಾ ಭೋಜನ ಪ್ರಸಾದ ಸುರಕ್ಷಿತ & ಪ್ರಮಾಣಿತ

Date:

ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ಭಕ್ತಾದಿಗಳು ಮಾತ್ರವಲ್ಲದೇ ವಿದೇಶದಿಂದಲೂ ಭಕ್ತರೂ ಆಗಮಿಸುತ್ತಿದ್ದು, ಶ್ರೀ ಮೂಕಾಂಬಿಕೆಯ ದರ್ಶನ ಪಡೆಯುತ್ತಿದ್ದಾರೆ.

ಕೊಲ್ಲೂರು ದೇವಾಲಯಲಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಉಚಿತ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದ್ದು, ಇಲ್ಲಿ ದೇವರಿಗೆ ಅರ್ಪಿಸುವ ನೈವೈದ್ಯ ಮತ್ತು ಭಕ್ತರಿಗೆ ನೀಡುವ ಭೋಜನ ಪ್ರಸಾದವು ಗರಿಷ್ಠ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯಕ್ಕೆ ಅತ್ಯಂತ ಸುರಕ್ಷಿತವಾದುದು ಎಂದು ಪ್ರಮಾಣ ಪತ್ರ ಪಡೆದಿದೆ.

ಭಾರತದ ಅಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಈ ಪ್ರಮಾಣ ಪತ್ರ ನೀಡಲಾಗಿದೆ. ಇಲ್ಲಿ ಭಕ್ತಾದಿಗಳಿಗೆ ತಯಾರಿಸುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ಆಹಾರ ತಯಾರಿಕಾ ಕಟ್ಟಡ ಮತ್ತು ಅಲ್ಲಿರುವ ಸೌಲಭ್ಯಗಳು, ಆಹಾರ ತಯಾರಿಸುವ ವಿಧಾನ,ಸ್ವಚ್ಛತೆ, ಆಹಾರ ತಯಾರಿಕಾ ಸಿಬ್ಬಂದಿಗಳಿಗೆ ನೀಡಿರುವ ತರಬೇತಿ ಈ ಅಂಶಗಳ ಆಧಾರದಲ್ಲಿ ಆಡಿಟ್ ಮಾಡಲಾಗಿದೆ.

ದೇವಾಲಯದಲ್ಲಿ ಈ ಎಲ್ಲಾ ಅಂಶಗಳಿಗೆ ಪ್ರಾದಾನ್ಯತೆ ನೀಡಿ ಆಹಾರ ತಯಾರಿಸುತ್ತಿರುವುದರಿಂದ ಈ ಪ್ರಮಾಣ ಪತ್ರ ನೀಡಲಾಗಿದೆ.

ಇಲ್ಲಿನ ದೇವಾಲಯದ ಆಹಾರ ತಯಾರಿಕಾ ಕೊಠಡಿಯು ಅತ್ಯಂತ ಸುಸಜ್ಜಿತವಾಗಿದೆ. ಕಟ್ಟಡವು ಮಳೆ ನೀರಿನಿಂದ ಸೋರುವಿಕೆ ಇಲ್ಲದೇ , ಉತ್ತಮ ಗುಣಮಟ್ಟದ ಗೋಡೆ ಹಾಗೂ ಕಾಲು ಜಾರದೇ ಇರುವ ನೆಲಹಾಸು ಸೌಲಭ್ಯ, ತುಕ್ಕು ಹಿಡಿಯದ ಕಿಟಕಿ ಬಾಗಿಲುಗಳು, ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳ ಗುಣಮಟ್ಟ, ಕಲಾಯಿ ಹಾಕಿರುತ್ತದೆ. ಉತ್ತಮ ಗಾಳಿ ಬೆಳಕು ಸೌಲಭ್ಯ , ಆಹಾರವನ್ನು ಬಿಸಿ ಮತ್ತು ತಂಪು ಮಾಡಲು ಬಳಸುವ ಯಂತ್ರೋಕರಣಗಳ ಸೌಲಭ್ಯ, ಆಹಾರ ತಯಾರಿಕಾ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಬಳಸುವ ಉತ್ತಮ ಕೊಠಡಿ ಸೌಲಭ್ಯವನ್ನು , ಪಾತ್ರೆಗಳನ್ನು ತೊಳೆ ನೀರು ಮತ್ತು ಆಹಾರ ತಯಾರಿಕಿಯ ಸಮಯದಲ್ಲಿ ಉಳಿದ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತಿದೆ.

ಆಹಾರ ತಯಾರಿಕೆಗೆ ಬಳಸುವ ಸಾಮಗ್ರಿಗಳು ಆಹಾರ ಸುರಕ್ಷತಾ ಪ್ರಮಾಣ ಪತ್ರ ಹೊಂದಿರುವ ಸರಬರಾಜುದಾರರ ಮೂಲಕವೇ ಖರೀದಿಸುತ್ತಿದೆ. ಯಾವುದೇ ಒಡೆದ ಆಹಾರ ಪ್ಯಾಕೆಟ್ ಗಳನ್ನು ಬಳಸುತ್ತಿಲ್ಲ. ಸರಬರಾಜು ಆದ ಆಹಾರ ಪದಾರ್ಥಗಳ ಅವಧಿ ಮೀರುವ ದಿನಾಂಕವನ್ನು ಪರಿಶೀಲಿಸುತ್ತಿದೆ. ಆ ಪದಾರ್ಥಗಳನ್ನು ಉಷ್ಣಾಂಶಕ್ಕೆ ತಕ್ಕಂತೆ ಕೆಡದಂತೆ ಇಡಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ. ಎಲ್ಲಾ ಪದಾರ್ಥಗಳನ್ನು ನಿರ್ದಿಷ್ಠ ಸ್ಥಳದಲ್ಲಿ ಶೇಖರಿಸಲಾಗುತ್ತಿದೆ. ಸೂಕ್ತ ಶೈತ್ಯಾಗಾರ ಮತ್ತು ಉಷ್ಣಾಗಾರಗಳ ಸೌಲಭ್ಯಗಳನ್ನು ಹೊಂದಿದೆ. ಆಹಾರ ಸರಬರಾಜು ವಾಹನ ಸಹ ಸ್ವಚ್ಚತೆಯಿಂದ ಕೂಡಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಆಹಾರ ಬಡಿಸುವ ಪಾತ್ರೆಗಳನ್ನು ಸಹ ಸ್ವಚ್ಛವಾಗಿರುವಂತೆ ನೋಡಿಕೊಂಡಿದೆ. ಆಹಾರ ನೀಡುವ ಸ್ಥಳದಲ್ಲಿ ಗರಿಷ್ಠ ಸ್ವಚ್ಛತೆಗೆ ಆದ್ಯತೆ ನೀಡಿದೆ. ಈ ಪ್ರದೇಶವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈ ಸ್ಥಳಕ್ಕೆ ಯಾವುದೇ ಕ್ರಿಮಿ ಕೀಟಗಳು ಬಾರದಂತೆ ಮತ್ತು ಬೆಳವಣಿಗೆಯಾಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ನಿತ್ಯವೂ ಕೈಗೊಳ್ಳಲಾಗುತ್ತಿದೆ.

ದೇವಾಲಯದಲ್ಲಿ ಆಹಾರ ಬಡಿಸುವವರಿಗೂ ಸಹ ಎಲ್ಲಾ ರೀತಿಯ ತರಬೇತಿ ನೀಡಿದೆ. ಸ್ವಚ್ಛತೆಯನ್ನು ಕಾಪಾಡಿಕೊಂಡು ಆಹಾರ ಬಡಿಸುವಂತೆ ನಿರ್ದೇಶನಗಳನ್ನು ನೀಡಿದೆ. ಅನಾರೋಗ್ಯ ಲಕ್ಷಣಗಳಿರುವ ಸಿಬ್ಬಂದಿಗಳಿಗೆ , ಆಹಾರ ತಯಾರಿಕಾ ಕೊಠಡಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಈ ಎಲ್ಲಾ ಅಂಶಗಳ ಬಗ್ಗೆ ನಿರಂತರ ಪರಿಶೀಲನೆ ಸಹ ನಡೆಸಲಾಗುತ್ತಿದೆ. ಒಂದು ಬಾರಿ ಮಾಡಿದ ಆಹಾರ ಉಳಿದರೆ ಅದನ್ನು ಮರು ಬಳಕೆ ಮಾಡದೇ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿದೆ. ಒಮ್ಮೆ ಕರಿದ ಎಣ್ಣೆಯನ್ನೂ ಸಹ ಮರು ಬಳಕೆ ಮಾಡುವುದಿಲ್ಲ. ಸಿಬ್ಬಂದಿಗಳಿಗೂ ಆಹಾರ ಸುರಕ್ಷತೆಯನ್ನೂ ಕಾಪಾಡುವ ಕುರಿತಂತೆ ತರಬೇತಿಯನ್ನೂ ಸಹ ನೀಡಲಾಗಿದೆ.

ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು , ಕೊಲ್ಲೂರು ಶ್ರೀ ಮೂಕಾಂಬಿಕ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅತ್ಯಂತ ಪರಿಶುದ್ದ, ಸುರಕ್ಷಿತ ಮತ್ತು ಗುಣಮಟ್ಟದ ಭೋಜನ ಪ್ರಸಾದವನ್ನು ನೀಡಲಾಗುತ್ತಿದೆ. ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಪ್ರಮಾಣಪತ್ರವನ್ನು ನೀಡಿದ್ದಾರೆ.

ಕೊಲ್ಲೂರು ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಭೋಜನ ಪ್ರಸಾದವು ಅತ್ಯಂತ ಸುರಕ್ಷಿತ ಮತ್ತು ಗುಣಮಟ್ಟದಿಂದ ಕೂಡಿದೆ ಎಂದು ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂಧ ಅನುಮತಿ ಪಡೆಯಲು ಬೇಕಾದ ಅಂಶಗಳ ಪಾಲನೆ ಕುರಿತಂತೆ ,ದೇವಾಲಯದ ಎಲ್ಲಾ ಸಿಬ್ಬಂದಿಗೆ ಮಾಹಿತಿ ಹಾಗೂ ಅಗತ್ಯ ತರಬೇತಿಯನ್ನು ನೀಡಿದೆ. ಈ ಬಗ್ಗೆ ಆಗಿಂದಾಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಸಲಹೆಗಳನ್ನು ನೀಡಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...