ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ರೋಚಕ ಗೆಲುವು.
ತ್ರಿಪಾಠಿ,ಮಾರ್ಕ್ರಮ್ ಅರ್ಧಶತಕ/ಸನ್ ರೈಸರ್ಸ್ ಗೆ 7 ವಿಕೆಟ್ ಗಳ ಭರ್ಜರಿ ಜಯರಾಹುಲ್ ತ್ರಿಪಾಠಿ (71 ರನ್, 37 ಎಸೆತ, 4 ಫೋರ್, 6 ಸಿಕ್ಸರ್) ಮತ್ತು ಎಡೆನ್ ಮಾರ್ಕ್ರಮ್ (68 ರನ್, 36 ಎಸೆತ, 6 ಫೋರ್, 4 ಸಿಕ್ಸರ್) ಅವರ ಸಿಡಿಲಬ್ಬರದ ಅರ್ಧಶತಕಗಳ ಸಾಹಸದಿಂದ ಮಿಂಚಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 15ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿದೆ.
ಬ್ರಬೋರ್ನ್ ಕ್ರೀಡಾಂಗಣ ದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹೈದ್ರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಗೆ ಇಳಿದ ಕೊಲ್ಕತ್ತಾ ತಂಡ, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 175. ರನ್ ಬಾರಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಹೈದ್ರಾಬಾದ್ ತಂಡ 13 ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಸಂಭ್ರಮಿಸಿತು.
ಆರಂಭಿಕ ಹಿನ್ನಡೆಯನ್ನು ಹೊರತಾಗಿಯೂ ತ್ರಿಪಾಠಿ ಮತ್ತು ಮಾರ್ಕ್ರಮ್ ಜೋಡಿ ಮೂರು ವಿಕೆಟ್ ಗೆ ಕೇವಲ 54 ಎಸೆತಗಳಲ್ಲಿ 94 ರನ್ ಸಿಡಿಸಿದರು. ನಂತರ ಪೂರನ್ ಜೊತೆ ಮುರಿಯದೆ 4ನೇ ವಿಕೆಟ್ಗೆ 43 ರನ್ ಜೊತೆಯಾಟ ಆಡಿದ ಮಾರ್ಕ್ರಮ್, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುನ್ನ ಕೆಕೆಆರ್ ಪರ ಇನ್ನಿಂಗ್ಸ್ ಆರಂಭಿಸಿದ ವೆಂಕಟೇಶ್ ಅಯ್ಯರ್ ಮತ್ತು ಆಸ್ಟ್ರೇಲಿಯಾದ t20 ಫಿಂಚ್, ತಂಡಕ್ಕೆ ಭದ್ರಬುನಾದಿ ಹಾಕುವಲ್ಲಿ ಎಡವಿದರು. ಹಾಲಿ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಿದ ಪಿಂಚ್ ಗೆ (7) ಮಾರ್ಕೊ ಜಾನ್ಸನ್ ಪೆವಿಲಿಯನ್ ಹಾದಿ ತೋರಿಸಿದರು. ಆಗ ತಂಡದ ಮೊತ್ತ 11. ರಕ್ಷಣಾತ್ಮಕ ಆಟದೊಂದಿಗೆ ಕ್ರೀಸ್ ಗೆ ಅಂಟಿಕೊಳ್ಳಲು ಯತ್ನಿಸಿದ್ದ ವೆಂಕಟೇಶ್ ಅಯ್ಯರ್ (6)ಗೆ ಟಿಪ್ ಇಂಡಿಯಾದ ಯಾರ್ಕರ್ ತಜ್ಞ ಟಿ. ನಟರಾಜನ್ ಮುಳ್ಳಾದರು. ನಂತರ 6 ರನ್ ಗಳ ಅಂತರದಲ್ಲಿ ಆಲ್-ರೌಂಡರ್ ಸುನಿಲ್ ನರೈನ್ ಅವರನ್ನು ಡಕ್ಔಟ್ ಗೆ ಸೇರಿಸುವಲ್ಲಿ ನಟರಾಜನ್ ಹಿಂದೆ ಬೀಳಲಿಲ್ಲ ಈ ಮೂಲಕ ನಾಯಕ ವಿಲಿಯಂಸನ್ ಅವರ ನಿಲುವಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.