Friday, October 4, 2024
Friday, October 4, 2024

ಶ್ರೀಮಠಕ್ಕೆ ಬರುವವರು ಜಾತಿ ಮತ್ತು ಪಕ್ಷವನ್ನು ಹೊರಗಿಟ್ಟು ಬನ್ನಿ-ಹರಿಹರಪುರಶ್ರೀ

Date:

ಭಾರತೀಯ ಸಂಸ್ಕೃತಿಯ ನಂಬಿಕೆ ಮತ್ತು ಆಚಾರ ವಿಚಾರಗಳಿಗೆ ಶಕ್ತಿ ತುಂಬುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ಆಗುತ್ತಿದೆ ಎಂದು ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.

ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕ ಕಾರ್ಯಕ್ರಮದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಅದ್ವೈತ ಸಿದ್ಧಾಂತದ ಪ್ರಕಾರ ಸಮಾನತೆಯನ್ನು ಕಾಪಾಡುವುದು ಧರ್ಮಗಳನ್ನು ಉಳಿಸುವುದು ಮಠ ಮತ್ತು ಧಾರ್ಮಿಕ ಕೇಂದ್ರಗಳ ಕೆಲಸವಾಗಬೇಕು ಎಂದರು.

ಅದ್ವೈತಿಗಳಾದ ನಾವು ವೈವಿಧ್ಯತೆಯನ್ನು ಬಯಸುವವರು. ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆ ನಿಲ್ಲುವವರೆಗೂ ನಾವು ವಿಶ್ರಮಿಸುವುದಿಲ್ಲ. ಮುಂದಿನ ದಿನಗಳಲ್ಲಿ ಶ್ರೀ ಮಠದಲ್ಲಿ ಸೌಹಾರ್ದತೆಯನ್ನು ಸಾರುವ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಶ್ರೀ ಮಠಕ್ಕೆ ಸಾಮರಸ್ಯದಿಂದ ಬೇಧಭಾವವಿಲ್ಲದೇ ಎಲ್ಲರೂ ಬರಬಹುದಾಗಿದೆ. ಶ್ರೀ ಮಠಕ್ಕೆ ಬರುವವರು ಜಾತಿ ಮತ್ತು ಪಕ್ಷವನ್ನು ಮಠದ ಹೊರಗೆ ಬಿಟ್ಟು ಬನ್ನಿ. ಭಗವಂತನ ಸನ್ನಿಧಿಯಲ್ಲಿ ಎಲ್ಲರೂ ಸಮಾನರು ಎಂದರು.

ವೈವಿಧ್ಯತೆಯಲ್ಲಿ ಏಕತೆ ಇರುವ ನಾಡು ನಮ್ಮದಾಗಿದೆ. ಕೆಲವರು ವೈವಿಧ್ಯತೆಯನ್ನೇ ನಕಾರಾತ್ಮಕವಾಗಿ ಬಿಂಬಿಸಿ ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಠಿಸುತ್ತಿದ್ದಾರೆ. ಸಮುದಾಯದ ಸಂಘಟನೆಗಳು ಸಾಮರಸ್ಯವನ್ನು ಮಾತಾಡಲು ಮುಂದಾಗಿದೆ. ಧರ್ಮ ಎಂದರೆ ಪರಸ್ಪರ ಜೋಡಿವುದೇ ಹೊರತು, ತುಂಡರಿಸುವುದಲ್ಲ. ತಾರತಮ್ಯ ಭಾವನೆಯಿಂದ ಹೊರಬಂದು ಸಾಮರಸ್ಯ ಸೌಹಾರ್ದತೆ ಮೆರೆಯಲು ಮುಂದಾಗಬೇಕು ಎಂದು ಹೇಳಿದರು.

ಭಗವಂತನು ಎಲ್ಲರಲ್ಲೂ ಇದ್ದಾನೆ. ಅವರವರ ಸೇವೆಗೆ ಅನುಗುಣವಾಗಿ ಫಲಾಫಲಗಳನ್ನು ಕೊಡುವವನು ಭಗವಂತ. ಬುದ್ಧನ ಹೃದಯ ಆದಿಶಂಕರಾಚಾರ್ಯರ ಮೆದುಳು. ಇವೆರಡು ಸೇರಿದಲ್ಲಿ ಸುಸಂಸ್ಕೃತಿಯ ಸಮಾಜ ಸೃಷ್ಠಿಯಾಗಲಿದೆ ಎಂದರು.

ಕುಂಭಾಭಿಷೇಕ ಕಾರ್ಯಕ್ರಮವು ಪರಮಾತ್ಮನ ಪ್ರೇರಣೆಯಂತೆ ಐತಿಹಾಸಿಕ ಕಾರ್ಯಕ್ರಮವಾಗಿ ನಡೆದಿದೆ. ಸಂಕಲ್ಪ ನಮ್ಮದು ಪ್ರೇರಣೆ ಭಗವಂತನದ್ದು, ಆತನ ಪ್ರೇರಣೆಯಂತೆ ಸಹಸ್ರಾರು ಭಕ್ತಾದಿಗಳ ಸೇವೆ ಮತ್ತು ಶ್ರಮ ಇದರಲ್ಲಿ ಅಡಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಅವರ ಆಶಯದಂತೆ ಸ್ವಸಹಾಯ ಸಂಘದ ಎಲ್ಲ ಸದಸ್ಯರು ಕಾರ್ಯಕ್ರಮದ ಏಳಿಗೆಗಾಗಿ ಶ್ರಮ ವಹಿಸಿದ್ದಾರೆ. ಅನೇಕರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ.

ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂದವರಿಗೆ ಶ್ರೀಲಕ್ಷ್ಮೀನರಸಿಂಹ ದೇವರ ಹಾಗೂ ಶಾರದಾ ಪರಮೇಶ್ವರಿಯ ಪರಿಪೂರ್ಣ ಆಶೀರ್ವಾದವಿರಲಿ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Backward Classes Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ...

Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ...

Klive Special Article "ದಧಾನಾಂ ಕರಪದ್ಮಾಭ್ಯಾಂಅಕ್ಷಮಾಲಾ ಕಮಂಡಲೂ/ದೇವಿ ಪ್ರಸೀದತು ಮಯಿಬ್ರಹ್ಮಚಾರಿಣ್ಯನುತ್ತಮಾ//ಮೊದಲನೆಯ ದಿನ...

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...