ರಷ್ಯಾ ಪಡೆಗಳು ಸಮುದ್ರದಿಂದ ಉಡಾಯಿಸುವ ದೀರ್ಘ ಶ್ರೇಣಿಯ ಕಲಿಬ್ ಕ್ಷಿಪಣಿಗಳನ್ನು ಬಳಸಿ ಕೀವ್ ಹೊರ ವಲಯದ ವಿಶ್ನೆವೆ ಪಟ್ಟಣದಲ್ಲಿನ ಉಕ್ರೇನ್ ಸೇನಾ ಸಾಧನಗಳ ಕಾರ್ಖಾನೆಯನ್ನು ಧ್ವಂಸಗೊಳಿಸಿವೆ ಎಂದು ತಿಳಿದುಬಂದಿದೆ.
ವಿಜಾರ್ ಕಂಪನಿಯ ರಕ್ಷಣಾ ಉಪಕರಣ ತಯಾರಿಕೆಯ ಸಂಕೀರ್ಣದಲ್ಲಿರುವ ಕಾರ್ಖಾನೆ ಧ್ವಂಸವಾಗಿದೆ.
ವಿಮಾನ ಹೊಡೆದುರುಳಿಸುವ ದೀರ್ಘ ಶ್ರೇಣಿಯ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಗಳ ಉತ್ಪಾದನೆ ಮತ್ತು ದುರಸ್ತಿ ಕಾರ್ಯಾಗಾರ ಹಾಗೂ ಹಡಗು ಹೊಡೆದುರುಳಿಸುವ ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
‘ಹಾರ್ಕಿವ್ ನಗರ ಸಮೀಪದ ಇಝಿಯುಮ್‌ಸ್ಕೊ ಗ್ರಾಮದಲ್ಲಿ ನಡೆಸಿದ ಕ್ಷಿಪಣಿ ದಾಳಿಗೆ ಪೋಲೆಂಡ್‌ನ 30 ಬಾಡಿಗೆ ಸೈನಿಕರು ಹತರಾಗಿದ್ದಾರೆಎಂದು ಪ್ರತ್ಯೇಕ ಹೇಳಿಕೆಯಲ್ಲಿ ಅದು ತಿಳಿಸಿದೆ.
ಗಡಿ ಪಟ್ಟಣಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಕ್ಕೆ ಮತ್ತು ‘ಮಾಸ್ಕವಾ’ ನೌಕೆ ಮುಳುಗಿಸಿದಕ್ಕೆ ಪ್ರತೀಕಾರವಾಗಿ ಕೀವ್ ಮೇಲೆ ಕ್ಷಿಪಣಿ ದಾಳಿ ತೀವ್ರಗೊಳಿಸುವುದಾಗಿ ರಷ್ಯಾ ಎಚ್ಚರಿಕೆ ನೀಡಿದೆ.