ರಾಜ್ಯ ಸರ್ಕಾರವು ಪಿಂಚಣಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಸರ್ಕಾರದ ಪಿಂಚಣಿ ಪ್ರಯೋಜನ ಪಡೆಯಲು ಇನ್ಮುಂದೆ 72 ಗಂಟೆಗಳಲ್ಲಿ ಪಿಂಚಣಿ ಪ್ರಮಾಣ ಪತ್ರ ಮನೆ ಬಾಗಿಲಿಗೆ ಬರಲಿದೆ.
ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಆರ್.
ಅಶೋಕ್ ಅವರು ಮಾಹಿತಿ ನೀಡಿದ್ದಾರೆ.
ಇಂಥ ಯೋಜನೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ.
ಯೋಜನೆಗೆ ಸಂಬಂಧಿಸಿದಂತೆ ನಾಳ್ಕು ಡಿಜಿಟಲ್ ಗಳ ಟೋಲ್ ಫ್ರೀ ನಂಬರ್ ನೀಡಲಾಗುತ್ತದೆ. ಆ ನಂಬರ್ ಗೆ ಕರೆ ಮಾಡಿ ಪಿಂಚಣಿ ಫಲಾನುಭವಿಗಳಾಗುವವರ ಆಧಾರ್ ಸಂಖ್ಯೆ, ಬ್ಯಾಂಕ್ ಅಕೌಂಟ್ ಸಂಖ್ಯೆ ನೀಡಬೇಕು. 15 ನಿಮಿಷಗಳಲ್ಲಿ ಆ ಮಾಹಿತಿ ಸಂಬಂಧಪಟ್ಟ ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತಿತರ ಅಧಿಕಾರಿಗೆ ಹೋಗುತ್ತದೆ. ಗ್ರಾಮ ಸಹಾಯಕರು ಅವರ ಮನೆಗೆ ತೆರಳಿ ಫಲಾನುಭವಿಯ ಫೋಟೋ, ಇತರೆ ದಾಖಲೆ ಪಡೆದು ಅಪ್ ಲೋಡ್ ಮಾಡುತ್ತಾರೆ.ಅದಾದ 72 ಗಂಟೆಗಳಲ್ಲಿ ಪಿಂಚಣಿ ಪ್ರಮಾಣ ಪತ್ರ ಫಲಾನುಭವಿಯ ಕೈಸೇರಲಿದೆ ಎಂದರು.
ಸರ್ಕಾರದ ಪಿಂಚಣಿ ಯೋಜನೆಯ ಪ್ರಯೋಜನ ಪಡೆಯಲು ಇನ್ಮುಂದೆ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ದೂರವಾಣಿ ಕರೆ ಮಾಡಿ ಹಲೋ ಎಂದು ಎರಡು ದಾಖಲೆಗಳ ನಂಬರ್ ಗಳನ್ನು ಕೊಟ್ಟರೆ ಸಾಕು, 72 ಗಂಟೆಯಲ್ಲಿ ಪಿಂಚಣಿ ಪ್ರಮಾಣ ಮನೆ ಬಾಗಿಲಿಗೆ ಬರಲಿದೆ ಎಂದರು.