ಗುತ್ತಿಗೆದಾರ ಮೃತ ಸಂತೋಷ ಪಾಟೀಲ ಆರೋಪಕ್ಕೆಗುರಿಯಾಗಿರುವ ಸಚಿವ ಶ್ರೀ ಕೆ .ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿಗಳಿಗೆ
ರಾಜಿನಾಮೆ ಸಲ್ಲಿಸುವ ನಿರ್ಧಾರ ಮಾಡಿರುವುದನ್ನ
ಪತ್ರಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರ ಮಾತಿನ ಆಯ್ದ ಭಾಗಗಳು ಹೀಗಿದೆ.
“ಮಾನ್ಯ
ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಇವತ್ತು ನಾನು ತೀರ್ಮಾನ ತಗೊಂಡಿದ್ದೇನೆ
ನಾಳೆ ದಿನ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡ್ತಾ ಇದ್ದೇನೆ. ನನ್ನನ್ನ ಬೆಳೆಸಿದ ಎಲ್ಲರಿಗೂ ಇರಿಸಿಮುರಿಸಾಗಬಾರದು ಅಂತ ರಾಜಿನಾಮೆ ಕೊಡ್ತಾ ಇದ್ದೇನೆ.
ನಾಳೆ ಸಂಜೆ ಬೆಂಗಳೂರಿಗೆ ಹೋಗಿ. ಮುಖ್ಯಮಂತ್ರಿಗಳಿಗೆ ರಾಜಿನಾಮೆ ಪತ್ರವನ್ನ ನೀಡುತ್ತಿದ್ದೇನೆ.
ಈ ಎಪಿಸೋಡ್ ನಲ್ಲಿ ಒಂದೇಒಂದು ಪರ್ಸೆಂಟ್ ತಪ್ಪಿದ್ರೆ ಭಗವಂತ ಶಿಕ್ಷೆ ಕೊಡಲಿ. ನಂಗೆ ಪೂರ್ಣ ನಂಬಿಕೆ ಇದೆ .ಈ ಒಂದು ಎಪಿಸೋಡ್ನಿಂದ ನಾನು ಮುಕ್ತವಾಗಿ ಹೊರಬರ್ತೇನೆ.
ನಾನೀಗಾಗ್ಲೆನೇ ಮುಖ್ಯಮಂತ್ರಿಗಳಿಗೆ ಇದ್ರ ಬಗ್ಗೆ ತನಿಖೆ ಮಾಡ್ಬೇಕು ಅಂತ ಹೇಳಿದಾಗ ಸಂತೋಷದಿಂದ ಇದನ್ನ ತನಿಖೆ ಖಂಡಿತ ಮಾಡಿಸ್ತೀನಿ ಅಂತ ಮುಖ್ಯಮಂತ್ರಿಗಳು ಹೇಳಿದಾರೆ.
ಪಕ್ಷದ ಸಂಘಟನೆಯ ಹಿರಿಯರಿಗೆ ,ಯಾರ್ಯರುನಂಗೆ ಇಲ್ಲೀ ತನಕ ಸಹಕಾರ ಕೊಟ್ಟಂತಹ ಕಾರ್ಯಕರ್ತರಿಗೆ ಅವರಿಗೆಲ್ಲ ಅಭಿನಂದನೆ ಸಲ್ಲಿಸ್ತೀನೆ.ನಾನು ನಾಳೆದಿನ ಸಂಜೆ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳಿಗೆ ರಾಜಿನಾಮೆ ಸಲ್ಲಿಸ್ತೀನಿ”
ಕಾಂಗ್ರೆಸ್ ಪ್ರತಿಕ್ರಿಯೆ : ” ನಾವು ಹೋರಾಟ ಮಾಡಿದಮೇಲೆ ( ಬಿಜೆಪಿಅವರು) ಚುರುಕಾದರು. ನಾವು ಹೇಳಿದ್ದು ಅರೆಸ್ಟ್ ಮಾಡಿ ಅಂತ.” ಅಧ್ಯಕ್ಷರು.ಕೆಪಿಸಿಸಿ.