ಉಕ್ರೇನ್, ರಷ್ಯಾ ಯುದ್ಧ ಆರಂಭಗೊಂಡು ಸುಮಾರು ಒಂದುವರೆ ತಿಂಗಳೇ ಸಹ ಇನ್ನೂ ಯುದ್ಧ ನಿಂತಿಲ್ಲ. ಈಗಾಗಲೇ ಯುದ್ಧದಲ್ಲಿ ಸಾಕಷ್ಟು ಸಾವು,ನೋವುಗಳು ಸಂಭವಿಸಿವೆ. ಉಕ್ರೇನ್ ಅಧ್ಯಕ್ಷ ಜಗತ್ತಿನ ರಾಷ್ಟ್ರಗಳಿಂದ ಅಗತ್ಯ ಶಸ್ತ್ರಾಸ್ತ್ರ ನೆರವನ್ನು ಬಯಸಿದ್ದಾರೆ.
ಈ ನಡುವೆ ಬ್ರಿಟನ್ ಪ್ರಧಾನಿ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ. ರಾಜಧಾನಿ ಕೀವ್‌ನಲ್ಲಿ ರಸ್ತೆ ರಸ್ತೆಗಳನ್ನು ಸುತ್ತಿ ರಷ್ಯಾ ಸೇನೆ ಸೃಷ್ಟಿ ಮಾಡಿದ ಯುದ್ಧದ ಭೀಕರತೆಯನ್ನು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆಯಲ್ಲಿ ರಷ್ಯಾ ವಿರುದ್ಧ ಸೆಣಸಾಡಲು ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಝೆಲೆನ್ಸ್ಕಿಗೆ ಭರವಸೆ ನೀಡಿದ್ದಾರೆ. ಈ ಭೇಟಿಯೊಂದಿಗೆ ಉಕ್ರೇನ್‌ಗೆ ತಮ್ಮ ದೀರ್ಘಕಾಲದ ಬೆಂಬಲವನ್ನು ಮುಂದುವರಿಸುವುದಾಗಿ ಬೋರಿಸ್ ಜಾನ್ಸನ್ ಅವರು ಝೆಲೆನ್ಸ್ಕಿಗೆ ತಿಳಿಸಿದ್ದಾರೆ.