ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಜಲಜೀವನ ಮಿಷನ್ ಯೋಜನೆಯು ದೇಶದ ಸಕಲ ಅಭಿವೃದ್ಧಿಗೆ ಉತ್ತೇಜಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
2019ರಲ್ಲಿ ಜಲ ಜೀವನ ಯೋಜನೆ ಆರಂಭವಾಗುವುದಕ್ಕೂ ಮೊದಲು ದೇಶದಲ್ಲಿ ಕೇವಲ ಶೇ.16.75 ದಷ್ಟು ನೀರಿನ ಪೂರೈಕೆ ಯಾಗುತ್ತಿತ್ತು. ಯೋಜನೆ ಆರಂಭವಾದ ಎರಡು ವರ್ಷಗಳಲ್ಲಿ ಆ ಪ್ರಮಾಣ ಶೇ.48.62ಕ್ಕೆ ಏರಿಕೆಯಾಗಿದೆ. 107 ಜಿಲ್ಲೆಗಳ 1.5 ಲಕ್ಷ ಗ್ರಾಮಗಳಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ.
ಇದುವರೆಗೆ 17.39 ಲಕ್ಷ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ನಿರ್ವಹಣೆಗಾಗಿಯೇ 4.82 ಲಕ್ಷ ಜಲ ಸಮಿತಿ ರಚಿಸಲಾಗಿದೆ. ನೀರಿನ ಗುಣಮಟ್ಟ ಪರೀಕ್ಷೆ ಗಾಗಿ 9.69 ಲಕ್ಷ ಮಹಿಳೆಯರಿಗೆ ತರ ಬೇತಿ ನೀಡಲಾಗಿದೆ. 4 ಲಕ್ಷಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.