ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಪಾಕಿಸ್ತಾನದ ರಾಜಕೀಯ ಈಗ ಒಂದು ಹಂತ ತಲುಪಿದೆ. ಪ್ರಧಾನಿ ಇಮ್ರಾನ್ ಖಾನ್ ಅವರು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿದ್ದಾರೆ.ಮತ್ತು ಪ್ರಧಾನಿ ಪಟ್ಟವನ್ನು ತ್ಯಜಿಸಿದ್ದಾರೆ.
ಮಧ್ಯರಾತ್ರಿ ನಡೆದ ವಿಶ್ವಾಸಮತ ಮಂಡನೆಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಸದಸ್ಯರು ಮತ ಹಾಕಿದರು.
ಪ್ರಧಾನಿ ಇಮ್ರಾನ್ ಖಾನ್ ಮತದಾನದ ಸಮಯದಲ್ಲಿ ಗೈರುಹಾಜರಾಗಲು ನಿರ್ಧರಿಸಿದರೆ, ಅವರ ಪಕ್ಷದ ಶಾಸಕರು ವಾಕ್‌ಔಟ್ ನಡೆಸಿದರು. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಶಾಸಕರು ಮತ ಚಲಾಯಿಸುವುದರೊಂದಿಗೆ ಅಂತಿಮವಾಗಿ ಅವಿಶ್ವಾಸ ಮತವನ್ನು ಅಂಗೀಕರಿಸಲಾಯಿತು.
ಸುಪ್ರೀಂ ಕೋರ್ಟ್ ಆದೇಶದಂತೆ ನಿನ್ನೆ ಇಮ್ರಾನ್ ಖಾನ್ ಅವಿಶ್ವಾಸ ಗೊತ್ತುವಳಿ ಎದುರಿಸಬೇಕಿತ್ತು. ಆದರೆ ಸ್ಪೀಕರ್ ನೆರವಿನಿಂದ ಇಡೀ ದಿನ , ರಾತ್ರಿಯ ತನಕವೂ ಇಮ್ರಾನ್ ಮತದಾನ ನಡೆಸಲಿಲ್ಲ.
ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳ ನಾಯಕರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಕೂಡಲೇ ಅವಿಶ್ವಾಸ ಗೊತ್ತುವಳಿ ಪರ ಮತದಾನ ನಡೆಸಿ ಎಂದು ಸ್ಪೀಕರ್ ಖೈಸರ್ ಅವರನ್ನು ಒತ್ತಾಯಿಸತೊಡಗಿದರು. ವಿಪಕ್ಷ ನಾಯಕ ಶೆಹಬಾಜ್ ಷರೀಫ್ ಅವರು ಸಂಸತ್‌ನಲ್ಲಿ ಮಾತನಾಡುತ್ತಿದ್ದಂತೆ ಆಡಳಿತಾರೂಢ ಪಕ್ಷದ ಸಂಸದರು ಗದ್ದಲವೆಬ್ಬಿಸಿದರು ಎಂಬ ನೆಪ ಹೇಳಿ ಸ್ಪೀಕರ್ ಕಲಾಪವನ್ನು ಮುಂದೂಡಿದರು.
ಅನಂತರ ಸದನ ಸಮಾವೇಶಗೊಂಡಾಗ ರಮ್ಜಾನ್ ಇರುವ ಕಾರಣ ಇಫ್ತಾರ್ ಬಳಿಕ ಮತದಾನ ನಡೆಸುತ್ತೇನೆ ಎಂದು ಭರವಸೆ ನೀಡಿ, ಕಲಾಪವನ್ನು ಮುಂದೆ ಹಾಕಿದರು. ಇಷ್ಟೆಲ್ಲ ಆಗುತ್ತಿದ್ದರೂ ಇಮ್ರಾನ್ ಖಾನ್ ಮಾತ್ರ ಸದನದಲ್ಲಿ ಉಪಸ್ಥಿತರಿರಲಿಲ್ಲ. ಆದರೆ ಈ ಬೆಳವಣಿಗೆಗಳ ನಡುವೆಯೇ ಅವರು ರಾತ್ರಿ 9ಕ್ಕೆ ಸಂಪುಟ ಸಭೆ ಕರೆದರು.
ಇಫ್ತಾರ್ ಮುಗಿಯುತ್ತಿದ್ದಂತೆ ಮತದಾನ ಆರಂಭವಾಗುತ್ತದೆ ಎಂದು ನಂಬಿದ್ದ ವಿಪಕ್ಷಗಳಿಗೆ ಮತ್ತೆ ನಿರಾಶೆಯಾಯಿತು. ಸ್ಪೀಕರ್ ಮತ್ತೆ ಕಲಾಪವನ್ನು ಮುಂದೂಡಿದರು. ಹೀಗಾಗಿ ರಾತ್ರಿಯಿಡೀ ಪಾಕ್ ಸಂಸತ್ತಿನಲ್ಲಿ ಹೈಡ್ರಾಮಾ ಸೃಷ್ಟಿಯಾಗುವ ಲಕ್ಷಣ ಗೋಚರಿಸಿತು.
ನಂತರ ಪ್ರಧಾನಿ ಇಮ್ರಾನ್ ಖಾನ್ ಮತದಾನದ ಸಮಯದಲ್ಲಿ ಗೈರುಹಾಜರಾಗಲು ನಿರ್ಧರಿಸಿದರೆ, ಅವರ ಪಕ್ಷದ ಶಾಸಕರು ವಾಕ್‌ಔಟ್ ನಡೆಸಿದರು. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಶಾಸಕರು ಮತ ಚಲಾಯಿಸುವುದರೊಂದಿಗೆ ಅಂತಿಮವಾಗಿ ಅವಿಶ್ವಾಸ ಮತವನ್ನು ಅಂಗೀಕರಿಸಲಾಯಿತು.
ಸುಪ್ರೀಂ ಕೋರ್ಟ್ ಆದೇಶದಂತೆ ಶನಿವಾರ ಇಮ್ರಾನ್ ಖಾನ್ ಅವಿಶ್ವಾಸ ಗೊತ್ತುವಳಿ ಎದುರಿಸಬೇಕತ್ತು. ಆದರೆ ಸ್ಪೀಕರ್ ನೆರವಿನಿಂದ ಇಡೀ ದಿನ ಕಣ್ಣಾಮುಚ್ಚಾಲೆಯಾಡಿದ ಇಮ್ರಾನ್ ರಾತ್ರಿಯ ತನಕವೂ ಮತದಾನ ನಡೆಸಲಿಲ್ಲ.
ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳ ನಾಯಕರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಕೂಡಲೇ ಅವಿಶ್ವಾಸ ಗೊತ್ತುವಳಿ ಪರ ಮತದಾನ ನಡೆಸಿ ಎಂದು ಸ್ಪೀಕರ್ ಖೈಸರ್ ಅವರನ್ನು ಒತ್ತಾಯಿಸತೊಡಗಿದರು. ವಿಪಕ್ಷ ನಾಯಕ ಶೆಹಬಾಜ್ ಷರೀಫ್ ಅವರು ಸಂಸತ್‌ನಲ್ಲಿ ಮಾತನಾಡುತ್ತಿದ್ದಂತೆ ಆಡಳಿತಾರೂಢ ಪಕ್ಷದ ಸಂಸದರು ಗದ್ದಲವೆಬ್ಬಿಸಿದರು ಎಂಬ ನೆಪ ಹೇಳಿ ಸ್ಪೀಕರ್ ಕಲಾಪವನ್ನು ಮುಂದೂಡಿದರು.