Saturday, December 6, 2025
Saturday, December 6, 2025

ರಷ್ಯದಿಂದ ಕ್ರಮಟೋರ್ಸ್ ರೈಲ್ವೆ ನಿಲ್ದಾಣದ ಮೇಲೆ ರಾಕೆಟ್ ದಾಳಿ

Date:

ರಷ್ಯಾ ಉಕ್ರೇನಿನ ಮೇಲೆ ದಾಳಿ ನಡೆಸುತ್ತಲೇ ಇದೆ. ಅಲ್ಲಿನ ನಾಗರಿಕರ ಮೇಲಿನ ದೌರ್ಜನ್ಯವನ್ನು ಕೂಡ ಮುಂದುವರೆಸಿರುವ ರಷ್ಯಾ ಸೇನಾ ಪಡೆಗಳು ಮುಂದುವರಿಸುತ್ತಲೇ ಇವೆ. ಪೂರ್ವ ಉಕ್ರೇನ್‌ನ ಕ್ರಮಟೋರ್ಸ್ ನಗರದ ರೈಲ್ವೆ ನಿಲ್ದಾಣದ ಮೇಲೆ ಇಂದು ರಾಕೆಟ್‌ ದಾಳಿ ನಡೆಸಿವೆ. ಈ ದಾಳಿಯಲ್ಲಿ ಸುಮಾರು 40 ಮಂದಿ ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಅಧಿಕ ಜನರು ಗಾಯಳುಗಳಾಗಿದ್ದಾರೆ.

ಅಮಾಯಕರನ್ನು ಗುರಿಯಾಗಿಸಿ ರಷ್ಯಾ ನಡೆಸಿದ ಈ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ರಷ್ಯಾ ಪ್ರಸ್ತುತ ಪೂರ್ವ ಉಕ್ರೇನಿನ ಡೋನೆಟ್ಸ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಜ್ಜಾಗಿದೆ. ರಾಕೆಟ್‌ಗಳ ಮೂಲಕ ಸತತವಾಗಿ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಯುದ್ಧವಲಯದಿಂದ ಸ್ಥಳಾಂತರಗೊಳ್ಳಲು ಸಾವಿರಾರು ಜನರು ಸಜ್ಜಾಗಿ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದರು. ಇದೇ ಸಂದರ್ಭದಲ್ಲಿ ರಷ್ಯಾ ಪಡೆಗಳು 2 ರಾಕೆಟ್‌ಗಳು ದಾಳಿ ನಡೆಸಿದೆ.

ಈ ಘಟನೆಯಲ್ಲಿ ಅಮಾಯಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಪುಟಿನ್‌ ಇಡೀ ಉಕ್ರೇನಿನ ಬದಲಾಗಿ ಈಗ ಕೇವಲ ಡೋನ್‌ಬಾಸ್‌ ವಲಯವನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿದ್ದಂತಿದೆ. ಆದ್ದರಿಂದ ರಷ್ಯಾ ಪೂರ್ವ ಉಕ್ರೇನಿನಲ್ಲಿ ತನ್ನ ಸೇನೆಯನ್ನು ಮರುಸಂಘಟನೆಗೊಳಿಸುತ್ತಿದೆ ಎಂದು ಉಕ್ರೇನಿನ ಸೇನೆ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಯುದ್ಧವಲಯದಿಂದ ಸ್ಥಳಾಂತರಗೊಂಡು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...